ಗುರುವಾರ , ಆಗಸ್ಟ್ 11, 2022
28 °C
ನಟ ಅಭಿಷೇಕ್ ಅಂಬರೀಶ್

ಕ್ಷೇತ್ರದ ಜನರಿಗೆ ತಿಳಿಸಿಯೇ ರಾಜಕೀಯ ಪ್ರವೇಶ ನಿರ್ಧಾರ: ಅಭಿಷೇಕ್ ಅಂಬರೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ರಾಜಕೀಯ ಪ್ರವೇಶ ಸೇರಿದಂತೆ ಯಾವುದೇ ನಿರ್ಧಾರ ಕೈಗೊಂಡರೂ ಕ್ಷೇತ್ರದ ಎಲ್ಲರಿಗೂ ತಿಳಿಸಿಯೇ ಕೈಗೊಳ್ಳುತ್ತೇನೆ’ ಎಂದು ನಟ ಅಭಿಷೇಕ್ ಅಂಬರೀಶ್ ಹೇಳಿದರು.

ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಅಂಬರೀಶ್ ಅಭಿಮಾನಿಗಳ ಸಂಘ ಏರ್ಪಡಿಸಿದ್ದ  ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಪ್ರೀತಿ ಇದ್ದ ಕಡೆ ನಾನು ಇರುತ್ತೇನೆ. ಸದ್ಯಕ್ಕೆ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಶೂಟಿಂಗ್ ಮುಗಿದಿದೆ. ಸದ್ಯದಲ್ಲೇ ಇದು ತೆರೆಗೆ ಬರಲಿದೆ. ‘ಕಾಳಿ’ ಚಿತ್ರದ ಜೊತೆಗೆ ಮತ್ತೊಂದು ಚಿತ್ರ ಇದೆ. ಸದ್ಯಕ್ಕೆ ಇದರಲ್ಲಿ ಬ್ಯುಸಿಯಾಗಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ನಾನು ಸರ್ಕಾರಕ್ಕೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಆದರೆ ಸರ್ಕಾರಿ ಶಾಲೆಗಳು ಉಳಿಯಬೇಕು. ಇದರ ಬಗ್ಗೆ ಚಿಂತಿಸಲಿ. ಈಗ ಬಹಳಷ್ಟು ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕೊಡಲಿ’ ಎಂದು ಮನವಿ ಅವರು ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು