ಚನ್ನಪಟ್ಟಣ: ನಗರದ ಸಪ್ತಋಷಿ ಚಾರಿಟಬಲ್ ಟ್ರಸ್ಟ್ ವತಿಯಿಂದ 2 ರಿಂದ 6 ವರ್ಷದೊಳಗಿನ ಮಕ್ಕಳಿಗಾಗಿ ಉಚಿತ ಸಾಮೂಹಿಕ ಅಕ್ಷರ ದೀಕ್ಷಾ ಯಜ್ಞ ಕಾರ್ಯಕ್ರಮವನ್ನು ಏ.20 ರಂದು ಬೆಳಿಗ್ಗೆ 7 ಗಂಟೆಯಿಂದ ನಗರದ ಮಹದೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.

ಬೆಳಿಗ್ಗೆ 7 ಗಂಟೆಗೆ ಸರಸ್ವತಿ ದತ್ತಾತ್ರೇಯ ಹೋಮವನ್ನು ರಾಮನಗರದ ಎಂ.ಪಿ. ಗಣೇಶ ಭಟ್ ಮತ್ತು ತಂಡದವರು ನೆರವೇರಿಸಲಿದ್ದು, 9 ಗಂಟೆಗೆ ಶೃಂಗೇರಿಯ ಹರಿಹರಪುರದ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹಪೀಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಅರಸೀಕೆರೆ ತಾಲ್ಲೂಕು ಹಾರನಹಳ್ಳಿಯ ಕೋಡಿಮಠ ಸಂಸ್ಥಾನದ ಚೇತನ್ ಮರಿದೇವರು ಆಶೀರ್ವಚನದ ಜತೆಗೆ ಸ್ವರ್ಣಬಿಂದು ಪ್ರಾಶನ ಕಾರ್ಯಕ್ರಮ ನಡೆಸುವರು. ತಾಲ್ಲೂಕಿನ ಹನಿಯೂರು ಗ್ರಾಮದ ಕರ್ಮಪೀಠದ ಶಿವಾನಂದಗಿರಿ ಸಿದ್ಧಸ್ವಾಮಿ ಸರಸ್ವತಿ ದತ್ತಾತ್ರೇಯ ಯಂತ್ರಧಾರಣೆ ಹಾಗೂ ಜ್ಞಾಪಕ ಶಕ್ತಿ ಲೇಹ್ಯ ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಸಂಸದ ಡಾ.ಸಿ.ಎನ್. ಮಂಜುನಾಥ್, ಶಾಸಕ ಸಿ.ಪಿ.ಯೋಗೇಶ್ವರ್ ಭಾಗವಹಿಸುವರು.

ಅಕ್ಷರ ದೀಕ್ಷಾ ಯಜ್ಞದಲ್ಲಿ ಪಾಲ್ಗೊಳ್ಳಲು ಬಯಸುವ ಪೋಷಕರು ಹೆಚ್ಚಿನ ಮಾಹಿತಿ ಹಾಗೂ ಉಚಿತ ನೋಂದಣಿಗಾಗಿ 78920 33474, 73496 33474 ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.