ಭಾನುವಾರ, ಮೇ 16, 2021
28 °C

ಡೇರಿಗೆ ವಿಶೇಷಾಧಿಕಾರಿ ನೇಮಕ: ವೈ. ವೆಂಕಟೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಾಲ್ಲೂಕಿನ ಹುಣಸೇದೊಡ್ಡಿ ಹಾಲು ಉತ್ಪಾದಕರ ಸಂಘಕ್ಕೆ ವಿಶೇಷಾಧಿಕಾರಿ ನೇಮಕ ಮಾಡಿ ಸಹಕಾರ ಸಂಘಗಳ ನಿಬಂಧಕ ವೈ. ವೆಂಕಟೇಶ್‌ ಆದೇಶ ಹೊರಡಿಸಿದ್ದಾರೆ.

ಸಂಘದ ಐದು ನಿರ್ದೇಶಕರು ಈಚೆಗೆ ರಾಜೀನಾಮೆ ನೀಡಿದ್ದು, ಅವರಲ್ಲಿ ಇಬ್ಬರು ಮಾತ್ರ ನಾಮಪತ್ರ ಹಿಂಪಡೆದಿದ್ದಾರೆ. ಈ ನಡುವೆ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಮುತ್ತುರಾಜು ಅವರ ತಂದೆ ವೀರಭದ್ರಯ್ಯ ಅವರು ಸಂಘದ ನಿರ್ದೇಶಕರಾಗಿದ್ದಾರೆ. ಅವರ ಆಯ್ಕೆಯು ಕಾನೂನಿಗೆ ವಿರುದ್ಧವಾಗಿದ್ದು, ಅವರ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಡೇರಿಯಲ್ಲಿ ಕೋರಂ ಕೊರತೆ ಎದುರಾಗಲಿದೆ.

ಹೀಗಾಗಿ ಸಹಕಾರ ಸಂಘದ ಅಧಿನಿಯಮದಂತೆ ಕಚೇರಿಯ ದ್ವಿತೀಯದರ್ಜೆ ಸಹಾಯಕ ವಿ. ಶಿನಾನಂದ ರೆಡ್ಡಿ ಅವರನ್ನು ಹುಣಸೇದೊಡ್ಡಿ ಡೇರಿಗೆ ವಿಶೇಷಾಧಿಕಾರಿಯಾಗಿ ನೇಮಕ ಮಾಡಿದ್ದು, ಅಧಿಕಾರ ವಹಿಸಿಕೊಂಡು ಸಂಘದ ಆಡಳಿತ ಮಂಡಳಿ ಪುನರ್ ರಚನೆಗೆ ಅಗತ್ಯ ಪ್ರಸ್ತಾವ ಸಲ್ಲಿಸಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು