ದೊಡ್ಡಬಳ್ಳಾಪುರ: ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ನಗರದ ಸೌಂದರ್ಯ ಮಹಲ್, ರಾಜ್‍ಕಮಲ್ ಚಿತ್ರಮಂದಿರದ ಮಾಲೀಕರು ಹಾಗೂ ಸಿಬ್ಬಂದಿ ವರ್ಗದಿಂದ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೌಂದರ್ಯ ಮಹಲ್ ಚಿತ್ರಮಂದಿರದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಥಿಯೇಟರ್ ಮಾಲೀಕ ಟಿ. ವಸಂತ್‌ಕುಮಾರ್, ‘ವರನಟ ಡಾ.ರಾಜ್‌ಕುಮಾರ್ ಕುಟುಂಬದ ಘನತೆಯನ್ನು ಉಳಿಸಿ ಬೆಳೆಸುವಲ್ಲಿ ಪುನೀತ್ ಅವರ ಪಾತ್ರ ದೊಡ್ಡದಾಗಿದೆ’ ಎಂದುಹೇಳಿದರು.

ಚಿತ್ರರಂಗದಲ್ಲಷ್ಟೇ ಅಲ್ಲದೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಚಿತ್ರರಂಗದ ಬದುಕನ್ನು ಸಾರ್ಥಕಪಡಿಸಿಕೊಂಡಿದ್ದಾರೆ. ಕುಟುಂಬ ಸಮೇತ ನೋಡಬಹುದಾದ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅವರು ಚಿತ್ರರಂಗದಲ್ಲಿ ಇನ್ನೂ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದರೆ, ಕನ್ನಡ ಚಿತ್ರರಂಗ ಮತ್ತಷ್ಟು ಶ್ರೀಮಂತವಾಗುತ್ತಿತ್ತು. ಅವರ ನಿಧನದಿಂದ ಚಿತ್ರ ಪ್ರದರ್ಶಕರಿಗೂ ತುಂಬಲಾರದ ನಷ್ಟವಾಗಿದೆ ಎಂದು ಸ್ಮರಿಸಿದರು.

ತಾಲ್ಲೂಕು ಶಿವರಾಜ್‍ಕುಮಾರ್ ಸೇನಾ ಸಮಿತಿ ಅಧ್ಯಕ್ಷ ಜೆ.ಆರ್. ರಮೇಶ್, ಉಪಾಧ್ಯಕ್ಷ ಜಿ. ರಾಮು, ಚಿತ್ರಮಂದಿರದ ಟಿ. ಪ್ರಸನ್ನಕುಮಾರ್, ರವಿಕುಮಾರ್, ಚಿನ್ನಪ್ಪ, ರಿಯಾಜ್, ಎಜಿಕೆ ಗೋಪಾಲ್ ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

ನಗರದ ರಾಜ್‍ಕಮಲ್ ಚಿತ್ರಮಂದಿರದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾಲೀಕ ಕೆ.ಸಿ. ರುದ್ರೇಗೌಡ, ವ್ಯವಸ್ಥಾಪಕ ಕೆ.ಎಸ್. ಹರೀಶ್‌ಕುಮಾರ್, ಸಿಬ್ಬಂದಿಯಾದ ಆಂಜಿನಪ್ಪ, ರವಿಕುಮಾರ್, ರಾಮಚಂದ್ರಪ್ಪ, ಗೋಪಾಲ್, ಆನಂದ್, ಸುಬ್ರಮಣಿ, ಉಪೇಂದ್ರಕುಮಾರ್ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.