ಮಂಗಳವಾರ, ಮೇ 24, 2022
31 °C

ಅಶ್ವತ್ಥನಾರಾಯಣ ವಿರುದ್ಧ ಬಿಜೆಪಿ ಮಂತ್ರಿಗಳಿಂದಲೇ ಷಡ್ಯಂತ್ರ; ಕುಮಾರಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಅಕ್ರಮ ನೇಮಕಾತಿ ವಿಚಾರದಲ್ಲಿ ಸಚಿವ ಅಶ್ವತ್ಥನಾರಾಯಣ ಅವರ ಹೆಸರನ್ನು  ಅವರ ಸಹೋದ್ಯೋಗಿಗಳೇ ಮಾಧ್ಯಮಗಳಿಗೆ ತೇಲಿಬಿಟ್ಟಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ‌. ಕುಮಾರಸ್ವಾಮಿ ಆರೋಪಿಸಿದರು.

ಚನ್ನಪಟ್ಟಣದಲ್ಲಿ ಬುಧವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಅಮಿತ್ ಶಾ ಭೇಟಿ ವೇಳೆ ಅಶ್ವತ್ಥನಾರಾಯಣ ಅವರ ಹೆಸರನ್ನು ಬೇಕಂತಲೇ ಎಳೆ ತಂದು, ಅವರ ತಲೆದಂಡಕ್ಕೆ ಒತ್ತಡ ಹೇರುವುದು ಬಿಜೆಪಿಯ ಕೆಲ‌ ನಾಯಕರ ಉದ್ದೇಶವಾಗಿತ್ತು. ಹೀಗಾಗಿ ಮಾಧ್ಯಮಗಳಿಗೆ ಅವರೇ ಮಾಹಿತಿ ನೀಡಿದ್ದಾರೆ ಎಂದು ದೂರಿದರು.

ಬಿಜೆಪಿ ವಿಚಾರದಲ್ಲಿ ನಾವೇನು ಮಾಡಬೇಕಿಲ್ಲ. ಅವರ ಮನೆಗೆ ಅವರೇ ಬೆಂಕಿ ಇಟ್ಟುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ದಾಖಲೆ ಮುಂದಿಡದೇ ಸುಮ್ಮನೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.‌

ಇವುಗಳನ್ನೂ ಓದಿ.. 

ಮೋದಿ ಮಾಧ್ಯಮಗಳ ಮೈಕ್ ಕಂಡರೆ ಎಕೆ–47 ಗನ್ ಕಂಡಂತೆ ಹೆದರುತ್ತಾರೆ: ಕಾಂಗ್ರೆಸ್ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು