ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ನೀರಿನಲ್ಲಿ ಮುಳುಗಿ ಮೂವರು ಬಾಲಕರ ಸಾವು

Published 17 ಮೇ 2024, 10:32 IST
Last Updated 17 ಮೇ 2024, 10:32 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಅಚ್ಚಲು ಗ್ರಾಮದ ಬಂಡೆ ಮೇಲಿರುವ ಹೊಂಡದಲ್ಲಿ ಶುಕ್ರವಾರ ಈಜಲು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ‌.

ರಾಮನಗರದ ಸುಲ್ತಾನ್ ನಗರದ ಶಾಬಾಜ್ (14), ಸುಲ್ತಾನ್ (13) ಹಾಗೂ ರಿಹಾನ್ ಖಾನ್ ((16) ಮೃತರು. ಈ ಪೈಕಿ, ಶಾಬಾಜ್ ಹಾಗೂ ರಿಯಾನ್ ಸಹೋದರರಾಗಿದ್ದಾರೆ.

ಮಧ್ಯಾಹ್ನ ನಮಾಜ್ ಮುಗಿಸಿ 2.30ರ ಸುಮಾರಿಗೆ 8 ಬಾಲಕರು ಈಜಲು ತೆರಳಿದ್ದರು. ಹೊಂಡ ಆಳವಿಲ್ಲವೆಂದು ಭಾವಿಸಿ ಮೊದಲಿಗೆ ಈ ಮೂವರು ಬಾಲಕರು ಧುಮುಕಿದ್ದಾರೆ. ಆದರೆ, ಮೇಲಕ್ಕೆ ಬರಲಾಗದೆ ಮುಳುಗಿದ್ದಾರೆ.

ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಹೊರತೆಗೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT