ಗುರುವಾರ , ಜನವರಿ 30, 2020
19 °C

ಗ್ರಾಮೀಣ ಬಂದ್‌ ಬೆಂಬಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರಾಜ್ಯ ಸಮಿತಿಯ ಕರೆಯ ಮೇರೆಗೆ ತಾಲ್ಲೂಕು ಸಮಿತಿ ವತಿಯಿಂದ ಜ.8ರಂದು ಗ್ರಾಮೀಣ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಸಮಸ್ತ ಜನತೆ ಕೈಜೋಡಿಸಬೇಕು ಎಂದು ರಾಜ್ಯ ಸಮಿತಿ ಸದಸ್ಯೆ ಎಸ್.ಜಿ.ವನಜ ಮನವಿ ಮಾಡಿದರು.

ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ರೈತರು, ಕೃಷಿ ಕೂಲಿಕಾರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಂದ್ ನಡೆಯಲಿದ್ದು, ವರ್ತಕರು ಅಂಗಡಿಗಳನ್ನು ಮುಚ್ಚಿ ಮುಷ್ಕರಕ್ಕೆ ಬೆಂಬಲ ಸೂಚಿಸಬೇಕು ಎಂದರು.

ಮುಷ್ಕರ

ಕರ್ನಾಟಕ ರಾಜ್ಯ ಗ್ರಾಮಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಸಮಿತಿ ಸಂಚಾಲಕ ನಾಗರಾಜು ಮಾತನಾಡಿ, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಶೇ 95 ರಷ್ಟು ಅನುದಾನ ಕಡಿತ ವಿರೋಧಿಸಿ ಜ.8ರಂದು ಬೆಳಿಗ್ಗೆ 10ಕ್ಕೆ  ಪುರಸಭೆ ಮುಂದಿನ ಕೆಂಪೇಗೌಡ ಪುತ್ಥಳಿ ಬಳಿಯಿಂದ ತಾಲ್ಲೂಕು ಪಂಚಾಯಿತಿ ಕಚೇರಿಯ ತನಕ ಸಾರ್ವತ್ರಿಕ ಮುಷ್ಕರ ಮತ್ತು ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು. ಎರಡೂ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಬಸ್‌ ಸಂಚಾರವಿದೆ

‘ಸಾರ್ವತ್ರಿಕ ಮುಷ್ಕರ ಇದ್ದರೂ ಸರ್ಕಾರಿ ಬಸ್‌ ಸಂಚಾರ ಮಾಮೂಲಿನಂತೆ ಇರುತ್ತದೆ. ನಮ್ಮ ಘಟಕದ ಎಲ್ಲ ಬಸ್‌ಗಳು ಸಂಚರಿಸಲಿವೆ’ ಎಂದು ಸರ್ಕಾರಿ ಬಸ್‌ ಡಿಪೊ ಮ್ಯಾನೇಜರ್‌ ನಟರಾಜ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು