ಬುಧವಾರ, ನವೆಂಬರ್ 25, 2020
19 °C

ರಾಮನಗರ: ತಂಗುದಾಣ ಸ್ವಚ್ಛಗೊಳಿಸಿದ ಯುವ ಬ್ರಿಗೇಡ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ ಸಂಭ್ರಮದಲ್ಲಿ ಯುವ ಬ್ರಿಗೇಡ್ ತಂಡದ ಸದಸ್ಯರು ನಗರದ ವಡೇರಹಳ್ಳಿ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ಸಂಭ್ರಮಿಸಿದರು.

ಯುವ ಬ್ರೀಗೇಡ್‍ನ ಜಿಲ್ಲಾ ಸಂಪರ್ಕ ಪ್ರಮುಖ ಕೃಷ್ಣ ಎಸ್. ರಾಜು ಮಾತನಾಡಿ, "ರಾಜ್ಯ ಸರ್ಕಾರವು ತಂಡಕ್ಕೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದೆ. ಈ ಕ್ಷಣವನ್ನು ವಿಭಿನ್ನವಾಗಿ ಆಚರಿಸುವ ಸಲುವಾಗಿ ತಂಡದ ವತಿಯಿಂದ ಬಸ್ ನಿಲ್ದಾಣ ಶುಚಿಗೊಳಿಸುವ ಕಾರ್ಯ ಮಾಡಲಾಗಿದೆ. ವಡೇರಹಳ್ಳಿಯ ತಂಗುದಾಣವನ್ನು 6-೭ ಗಂಟೆ ಶ್ರಮದಾನದ ಮೂಲಕ ಶುಚಿ ಮಾಡಿ ಕಾರ್ಯಕರ್ತರೇ ಬಣ್ಣ ಬೆಳೆದಿದ್ದಾರೆ. ಇದಕ್ಕೆ ಕೊಹಿನೂರು ಸಂದೇಶವನ್ನು ಬರೆಯಲಾಗಿದೆ ಎಂದು ಹೇಳಿದರು.

ವಡೇರಹಳ್ಳಿ ತಂಗುದಾಣದ ಆವರಣದಲ್ಲಿ ಬಸ್ ನಿಲ್ಲಿಸುವಂತೆ ಕೆಎಸ್‍ಆರ್‌ಟಿಸಿ ಅಧಿಕಾರಿಗಳಲ್ಲಿಮನವಿ ಮಾಡಿಕೊಂಡಿದ್ದೇವೆ. ಜತೆಗೆ, ಸುತ್ತಮುತ್ತಲಿನ ಗ್ರಾಮಸ್ಥರು ಸಹ ತಂಗುದಾಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ಯುವ ಬ್ರಿಗೇಡ್‍ನ ಕಾರ್ಯಕರ್ತರಾದ ಜೆ.ಸಿ. ಮಂಜುನಾಥ್, ರುದ್ರೇಶ್, ಸುಹಾಸ್, ನಮಿತ್‌, ಈರಣ್ಣ ಮುಂತಾದವರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.