ನಾಮಪತ್ರ ಸಲ್ಲಿಸಿ ಹೊರಬಂದ ನಿಖಿಲ್ ಅವರನ್ನು ಹೆಗಲ ಮೇಲೆ ಹೊತ್ತು ತೆರೆದ ವಾಹನದತ್ತ ಕರೆದೊಯ್ದ ಕಾರ್ಯಕರ್ತರು
ಕಿಕ್ಕಿರಿದು ಸೇರಿದ್ದ ಕಾರ್ಯಕರ್ತರ ನಿಯಂತ್ರಣಕ್ಕೆ ಬ್ಯಾರಿಕೇಡ್ ಹಾಕಿ ಹರಸಾಹಸಪಟ್ಟ ಪೊಲೀಸರು
ಪತಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯದ್ದಾಗಿದ್ದ ಪತ್ನಿ ರೇವತಿ ಅವರಿಗೆ ಕಾರ್ಯಕರ್ತೆಯರು ಹಸ್ತಲಾಘವ ಮಾಡಿದರು

ಹಗಲುವೇಷದಲ್ಲಿ ಬಂದಿರುವ ಯೋಗೇಶ್ವರ್ ಅದೇನೊ ಭಗೀರಥ ಅಂತೆ. ದೇವೇಗೌಡರು ಅಣೆಕಟ್ಟ್ಟೆ ನಿರ್ಮಿಸದಿದ್ದಿದ್ದರೆ ಸದಾನಂದ ಗೌಡರು ಹಣ ಬಿಡುಗಡೆ ಮಾಡದಿದ್ದರೆ ಕೆರೆಗಳಿಗೆ ಎಲ್ಲಿಂದ ನೀರು ಬರುತ್ತಿತ್ತು?
-ಡಾ. ಕೆ. ಅನ್ನದಾನಿ ಜೆಡಿಎಸ್ ಮಾಜಿ ಶಾಸಕ
ನಿಖಿಲ್ ಅಣ್ಣ ನಮ್ಮೆಲ್ಲರ ಒತ್ತಡದಿಂದ ಸ್ಪರ್ಧಿಸಿದ್ದಾರೆ. ಪಕ್ಷದ ಮುಂದಿನ ಆಧಾರಸ್ತಂಭವಾಗಿರುವ ಅವರನ್ನು ಗೆಲ್ಲಿಸುವ ಹೊಣೆ ನಮ್ಮದು. ಸ್ವಾಭಿಮಾನಿ ಎನ್ನುವ ಪಕ್ಷಾಂತರಿಗೆ ಪಾಠ ಕಲಿಸಬೇಕು.
-ಎಚ್.ಸಿ. ಜಯಮುತ್ತು ಅಧ್ಯಕ್ಷ ಚನ್ನಪಟ್ಟಣ ತಾಲ್ಲೂಕು ಜೆಡಿಎಸ್