ಚನ್ನಪಟ್ಟಣ: ಅಕ್ಷರ ಕ್ರಾಂತಿ ಕ್ರಾಂತಿ ಜತೆಗೆ ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದರ್ಶನದ ನ್ಯೆತಿಕ ಶಿಕ್ಷಣ ಪಡೆದಾಗ ಮಾತ್ರ ಇಂದಿನ ಸಮಾಜದಲ್ಲಿ ಸಮಾನತೆ ಪಡೆಯಲು ಸಾಧ್ಯ ಎಂದು ತಹಶೀಲ್ದಾರ್ ಬಿ.ಎಸ್.ಗಿರೀಶ್ ಅಭಿಪ್ರಾಯಪಟ್ಟರು.

ನಗರದ ಕೊಲ್ಲಾಪುರದಮ್ಮ ದೇವಸ್ಥಾನ ಅವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಜೀವ್ ಸಿದ್ಧಾರ್ಥ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಹಾಗೂ ಇತರ ಯೋಜನೆಗಳ ಕುರಿತು ತಾಲ್ಲೂಕು ಮಟ್ಟದ ವಿಚಾರಗೋಷ್ಠಿ, ಕಾರ್ಯಾಗಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿರುವ ಕಾಯ್ದೆ ಅರ್ಥೈಸಿಕೊಂಡಾಗ ಮಾತ್ರ ನಮ್ಮಲ್ಲಿರುವ ತೊಡಕುಗಳನ್ನು ತಡೆಗಟ್ಟಬಹುದು. ಸಮಾಜದಲ್ಲಿರುವ ಅಸಮಾನತೆ ತಡೆಗಟ್ಟಲು ಸಂವಿಧಾನ ಯಥಾವತ್ತಾಗಿ ಜಾರಿಯಾಗುವ ಅವಶ್ಯ ಇದೆ ಎಂದರು.

ನಗರಸಭೆ ಪೌರಯುಕ್ತ ಬಿ.ಮಹೇಂದ್ರ ಮಾತನಾಡಿ, ಸಂವಿಧಾನದಲ್ಲಿರುವ ತತ್ವ–ಸಿದ್ಧಾಂತ ಮ್ಯೆಗೂಡಿಸಿಕೊಂಡು ಶಿಕ್ಷಣದ ಬೆಳವಣಿಗೆಗೆ ಮುಂದಾದಾಗ ಮಾತ್ರ ಪ್ರತಿಯೊಬ್ಬರೂ ಪ್ರತಿಯೊಂದು ಹಕ್ಕು ಪಡೆದು ಸಮಾಜದಲ್ಲಿ ಗೌರವ ಪಡೆಯಬಹುದು. ಸಮಾಜದಲ್ಲಿ ಜೀವಂತವಾಗಿರುವ ಅನಿಷ್ಠ ಪದ್ಧತಿ ಕಿತ್ತೆಸೆಯಲು ಇಂತಹ ಕಾರ್ಯಕ್ರಮ ಅವಶ್ಯ ಎಂದರು.

ಸಾಹಿತಿ ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಬೀರಯ್ಯ ಕಾಯ್ದೆ, ಕಾನೂನು, ಯೋಜನೆಗಳ ಕುರಿತು ಉಪನ್ಯಾಸ ನೀಡಿದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಂ.ಮಂಜುನಾಥ್, ತಾ.ಪಂ.ಯೋಜನಾಧಿಕಾರಿ ಸಿದ್ದರಾಜಮ್ಮ, ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗರಾಜು, ಸರ್ಕಾರಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್.ಜ್ಯೆಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಸಿದ್ದಯ್ಯ, ಕೊಲ್ಲಾಪುದಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ವೆಂಕಟೇಶ್, ಡಿಎಸ್ಎಸ್ ಸಂಚಾಲಕ ವೆಂಕಟೇಶ್, ಟ್ರಸ್ಟ್ ಅಧ್ಯಕ್ಷ ಶಿವರಾಮು, ಇತರರು ಭಾಗವಹಿಸಿದ್ದರು.

ಟ್ರಸ್ಟ್ ಕಾರ್ಯದರ್ಶಿ ಎಸ್.ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರು ಅಸ್ಪೃಶ್ಯತೆ ಜಾಗೃತಿ ಕುರಿತು ನಾಟಕ ಪ್ರದರ್ಶನ ಹಾಗೂ ಜಾಗೃತಿ ಗೀತಗಾಯನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.