ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ | ಮಾವಿನತೋಟಕ್ಕೆ ಬೆಂಕಿ: ಫಸಲು ನಷ್ಟ

Published 22 ಮಾರ್ಚ್ 2024, 4:56 IST
Last Updated 22 ಮಾರ್ಚ್ 2024, 4:56 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಮಾವಿನತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹತ್ತಕ್ಕೂ ಹೆಚ್ಚು ಮಾವಿನಮರಗಳು ಸುಟ್ಟುಹೋಗಿವೆ.

ಗ್ರಾಮದ ರೈತ ಪಟೇಲ್ ಶಿವಣ್ಣ ಅವರ ಮಾವಿನತೋಟಕ್ಕೆ ಬೆಂಕಿ ಬಿದ್ದಿದ್ದು, ತೋಟದಲ್ಲಿ ಒಣಗಿದ ಎಲೆಗಳು, ಒಣಗಿದ ಹುಲ್ಲಿಗೆ ಬೆಂಕಿ ಹೊತ್ತುಕೊಂಡು ಬೆಂಕಿಯ ಕೆನ್ನಾಲಿಗೆ ತೀವ್ರವಾದ ಕಾರಣ ಮಾವಿನಮರಗಳು ಸುಟ್ಟುಹೋಗಿದ್ದು, ₹ 2 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 

ಕಿಡಿಗೇಡಿಗಳು ತೋಟಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿ ಶಿವಣ್ಣ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT