ಭಾನುವಾರ, ಮೇ 22, 2022
23 °C

ಕನಕಪುರ: 22ರಿಂದ ಚಿಕ್ಕಮುದುವಾಡಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕಮುದುವಾಡಿ ಗ್ರಾಮದಲ್ಲಿ ಶ್ರೀಲಕ್ಷ್ಮಿನರಸಿಂಹಸ್ವಾಮಿ, ಬಸವೇಶ್ವರ, ಮಾರಮ್ಮ, ಸಿದ್ದಲಿಂಗೇಶ್ವರರ ಜಾತ್ರಾ ಮಹೋತ್ಸವವು ಏ. 22ರಿಂದ 26ರವರೆಗೆ ನಡೆಯಲಿದೆ.

ಶುಕ್ರವಾರ ಸಂಜೆ ವೀರಭದ್ರಸ್ವಾಮಿಯ ಎಳವಾರ ಕಾರ್ಯಕ್ರಮವಿದೆ. ಶನಿವಾರ ಬೆಳಿಗ್ಗೆ ಗಂಗಾಪೂಜೆಯೊಂದಿಗೆ ಕೊಂಡೋತ್ಸವ ನಡೆಯಲಿದೆ. 11 ಗಂಟೆ ನಂತರ ಗ್ರಾಮದಲ್ಲಿ ಸಾಮೂಹಿಕವಾಗಿ ಅಡುಗೆ ಮಾಡಿ ಅನ್ನದಾಸೋಹ ನಡೆಯುತ್ತದೆ. ಇದಕ್ಕೆ ಚಿಕ್ಕಮುದುವಾಡಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರ ನೀಡಲಿದ್ದಾರೆ.

ಭಾನುವಾರ ಗ್ರಾಮದಲ್ಲಿ ಲಕ್ಷ್ಮಿನರಸಿಂಹಸ್ವಾಮಿ, ಮಾರಮ್ಮ, ಬಸವೇಶ್ವರ, ಸಿದ್ದಲಿಂಗೇಶ್ವರರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸೋಮವಾರ ಸುತ್ತಮುತ್ತಲಿನ ಹಳ್ಳಿಗಳು ಸೇರಿದಂತೆ ಚಿಕ್ಕಮುದುವಾಡಿ ಗ್ರಾಮದಲ್ಲಿ ಸುತ್ತು ಮೆರವಣಿಗೆ ನಡೆಯಲಿದೆ. ಸೋಮವಾರ ರಾತ್ರಿ 12 ಗಂಟೆಗೆ ಗ್ರಾಮದಲ್ಲಿ ತಂಬಿಟ್ಟಿನ ಆರತಿ ನಡೆಯಲಿದೆ. ಮಂಗಳವಾರ ಜಾತ್ರಾ ಮಹೋತ್ಸವ ಮುಕ್ತಾಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು