ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗ್ರಾಮವೊಂದರ 29 ವರ್ಷದ ಯುವಕ ಹಾಗೂ ಹಾರೋಹಳ್ಳಿ ತಾಲ್ಲೂಕಿನ ಗ್ರಾಮವೊಂದರ 15 ವರ್ಷದ ಬಾಲಕಿಯೊಂದಿಗೆ ಮದುವೆ ನಡೆದಿದೆ. ಈ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಬಾಲ ವಿವಾಹ ದೃಢಪಡಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಬಾಲಕಿಯನ್ನು ಬಾಲ ಮಂದರಿಕ್ಕೆ ಕಳುಹಿಸಲಾಗಿದೆ.