ಗುರುವಾರ , ಏಪ್ರಿಲ್ 2, 2020
19 °C

ರುದ್ರಭೂಮಿ ನೆಲಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಗಾಣಿಗರ ರುದ್ರಭೂಮಿಯನ್ನು ಗುರುವಾರದ ಮುಂಜಾನೆ ಯಾವುದೇ ಮಾಹಿತಿ ಇಲ್ಲದೆ ಸುಮಾರು 200 ವರ್ಷಗಳ ಇತಿಹಾಸವುಳ್ಳ ರುದ್ರಭೂಮಿಯನ್ನು ಏಕಾಏಕಿ ನೆಲಸಮ ಮಾಡಿದ್ದಾರೆ.

ಇದರಿಂದ ಆಕ್ರೋಶಗೊಂಡ ಗಾಣಿಗರ ಸಮುದಾಯದವರು ಕಾಮಗಾರಿ ನಡೆಸಿದ ಜೆಸಿಬಿಯನ್ನು ಹೊರಹಾಕಿದ್ದಾರೆ. ಶಾಸಕ ಎ.ಮಂಜುನಾಥ್, ಬಿಡದಿ ಪುರಸಭೆ ಅಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಜನರ ಅಹವಾಲು ಸ್ವೀಕರಿಸಿ ಈ ನೆಲಸಮ ಮಾಡಿದ ಅಧಿಕಾರಿಗಳು ಹಾಗೂ ಜೆಸಿಬಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಸುಮಾರು 20 ಗುಂಟೆಯ ಜಮೀನು ಕಂದಾಯ ಅಧಿಕಾರಿಗಳ ಮಾಹಿತಿಯಲ್ಲಿ ಈ ಪ್ರದೇಶ ಹೈಟೆಕ್ ಬಸ್ ನಿಲ್ದಾಣ ಬಿಡದಿ ಎಂದು ನಮೂದಿಸಲಾಗಿದೆ ಎಂದು ಹೇಳಿರುತ್ತಾರೆ. ಕೂಡಲೇ ನಮ್ಮ ರುದ್ರಭೂಮಿಯನ್ನು ಹಿಂತಿರುಗಿಸಬೇಕು ಎಂದು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು.

ಪುರಸಭೆ ಸದಸ್ಯರಾದ ದೇವರಾಜ್, ರಾಜು, ರಾಮನಹಳ್ಳಿ ರಮೇಶ್, ಮುಖಂಡರು ಆನಂದ್, ನಾಗೇಂದ್ರ, ಮಂಜುನಾಥ್, ಮುಂತಾದವರುಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)