ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಎಸ್ಪಿ ಹೆಸರಿನಲ್ಲಿ ವಂಚನೆ: ಬಿಹಾರದ ಆರೋಪಿಗಳ ತಂಡದಿಂದ ಹಣ ವಸೂಲಿ ತಂತ್ರ

ಐಪಿಎಸ್‌ ಅಧಿಕಾರಿ ಚಂದ್ರಗುಪ್ತರಿಂದ ದೂರು ದಾಖಲು
Last Updated 16 ಸೆಪ್ಟೆಂಬರ್ 2020, 16:33 IST
ಅಕ್ಷರ ಗಾತ್ರ

ರಾಮನಗರ: ಸೈಬರ್‌ ಕಳ್ಳರ ಗುಂಪೊಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಹೆಸರಿನಲ್ಲೇ ಜನರನ್ನು ವಂಚಿಸಿ ಹಣ ಸಂಗ್ರಹಿಸಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿದ್ದಾರೆ.

ರಾಮನಗರ ಎಸ್ಪಿ ಹೆಸರಿನಲ್ಲಿ ಈ ಫೇಸ್‌ಬುಕ್‌ ಪೇಜ್‌ ತೆರೆದಿದ್ದ ಈ ಖದೀಮರ ಗುಂಪು ಹಲವು ಮಂದಿಗೆ ಸ್ನೇಹದ ವಿನಂತಿ ಕಳುಹಿಸಿತ್ತು. ಬಳಿಕ ಅಂತಹ ವ್ಯಕ್ತಿಗಳಿಂದ ಹಣದ ಸಹಾಯವನ್ನೂ ಕೋರಿತ್ತು. ಇದಕ್ಕೆ ಹಲವರು ಸ್ಪಂದಿಸಿದ್ದು, ಗೂಗಲ್‌ ಪೇ-ಫೋ‌ನ್‌ ಪೇ ಮೊದಲಾದ ವಿಧಾನಗಳ ಮೂಲಕ ₹10-20 ಸಾವಿರ ಸಂದಾಯ ಮಾಡಿದ್ದಾರೆ. ರಾಮನಗರದ ವ್ಯಕ್ತಿ ಸೇರಿದಂತೆ ಅನೇಕರು ಈ ಮೋಸಕ್ಕೆ ಬಲಿಯಾಗಿ ಹಣ ಸಂದಾಯ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಫೇಸ್‌ಬುಕ್‌ ಪುಟದಲ್ಲಿ ರಾಮನಗರ ಎಸ್ಪಿ ಹೆಸರಿನಲ್ಲಿ ಐಪಿಎಸ್‌ ಅಧಿಕಾರಿ ಚಂದ್ರಗುಪ್ತ ಭಾವಚಿತ್ರವನ್ನು ಬಳಸಲಾಗಿದೆ. ಅವರು ಈ ಹಿಂದೆ ರಾಮನಗರ ಎಸ್ಪಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಲೇ ಚಂದ್ರಗುಪ್ತ ರಾಮನಗರ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಬಿಹಾರಿಗಳ ಕೃತ್ಯ: ಈ ಸೈಬರ್‍ ಅಪರಾಧ ಚಟುವಟಿಕೆಗಳ ಹಿಂದೆ ಬಿಹಾರ ರಾಜ್ಯದ ಆರೋಪಿಗಳು ಕೆಲಸ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಬಂಧನ ಮತ್ತು ಹೆಚ್ಚಿನ ತನಿಖೆಗಾಗಿ ರಾಮನಗರ ಪೊಲೀಸರ ತಂಡ ಶೀಘ್ರದಲ್ಲೇ ಬಿಹಾರಕ್ಕೆ ತೆರಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT