ಮಂಗಳವಾರ, ಜನವರಿ 28, 2020
19 °C

ನಾಳೆ 'ದಾಸ ಸಾಹಿತ್ಯೋತ್ಸವ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ದಾಸ ಸಾಹಿತ್ಯ ಪರಿಷತ್‌ ವತಿಯಿಂದ ‘ದಾಸ ಸಾಹಿತ್ಯೋತ್ಸವ’ವು ಜ.11 ರಂದು ಇಲ್ಲಿನ ಬಾಣಂತ ಮಾರಮ್ಮ ಬಡಾವಣೆಯ ಸರ್ಕಾರಿ ನೂತನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಸಾಹಿತಿ ಡಾ.ಕೆ.ರಮಾನಂದ್‌ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕವಿ ಸತ್ಯವಿಠಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿಗಳಾದ ಚಿಕ್ಕಮರೀಗೌಡ, ಕೂ.ಗಿ.ಗಿರಿಯಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಶ್ರೀಪಾದರಾಜರು ಮತ್ತು ಗೋಪಾಲದಾಸರು ವಿಜಯದಾಸ ರಚನೆಗಳ ಪ್ರಸ್ತಾಪ ಮಾಡಲಿದ್ದಾರೆ. ನಾಗಮ್ಮ ಮತ್ತು ನಾರಾಯಣ ರಾವ್‌ ಪಿಸ್ಸೆ ಕೀರ್ತನೆಗಳ ಗಾಯನ ನಡೆಸಿಕೊಡಲಿದ್ದಾರೆ ಎಂದು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು