ರಾಮನಗರ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಹಿರಿಯ ಉಪನ್ಯಾಸಕರುಗಳ ಮೂಲಕಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವ ಕುರಿತು ಹೊರಡಿಸಿರುವ ಜಂಟಿ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರ ಮೂಲಕ, ಇಲಾಖೆ ನಿರ್ದೇಸಕರಿಗೆ ಮನವಿ ಸಲ್ಲಿಸಿದರು.

ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗಾ ವಹಿಸುವ ಉದ್ದೇಶದಿಂದ ಡಯಟ್ನಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರ ಮೂಲಕ ಸ್ಥಳೀಯವಾಗಿ ಪರಿಶೀಲನೆಗಳನ್ನು ನಡೆಸುವಂತೆ ತೀರ್ಮಾನಿಸಲಾಗಿದೆ. ಆದರೆ, ಡಯಟ್ ಮತ್ತು ಶಾಲಾ ಶಿಕ್ಷಣ ಇಲಾಖೆ ನಿರ್ದೇಶನಾಲಯಗಳು ಒಟ್ಟಿಗೆ ಹೊರಡಿಸಿರುವ ಈ ಜಂಟಿ ಸುತ್ತೋಲೆ ಪಿಯು ಶಿಕ್ಷಣದ ಅಸ್ಮಿತೆ, ಗೌರವ ಹಾಗೂ ಶೈಕ್ಷಣಿಕ ತತ್ವಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಸುತ್ತೋಲೆಯಲ್ಲಿ ಡಯಟ್ ಹಿರಿಯ ಉಪನ್ಯಾಸಕರು ಎಂದು ಉಲ್ಲೇಖಿಸಲಾಗಿದೆ. ಆದರೆ, ವಾಸ್ತವವಾಗಿ ಡಯಟ್ನಲ್ಲಿ ಅಂತಹ ಹುದ್ದೆ ಇಲ್ಲ. ಬದಲಿಗೆ, ಅಲ್ಲಿರುವುದು ಪ್ರಶಿಕ್ಷಕರ ಹುದ್ದೆ. ಡಯಟ್ನಲ್ಲಿರುವವರು ವಿಷಯಕ್ಕೆ ಸಂಬಂಧಪಟ್ಟಂತೆ ವಿಷಯಾಧಾರಿತ ಬೋಧನಾ ಪದ್ಧತಿಯ ಪಾಠ ಮಾಡುತ್ತಾರೆಯೇ ವಿನಾ ಅವರಿಗೆ ಪದವಿ ಪೂರ್ವ ಶಿಕ್ಷಣದ ವಿಷಯಕ್ಕೆ ಸಂಬಂಧಪಟ್ಟಂತೆ (10+2) ಆಳವಾದ ಜ್ಞಾನ ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಮೂಲಭೂತ ಅರಿವಿಲ್ಲದವರು, ವಿಜ್ಞಾನದ ಪೂರ್ಣ ದೃಷ್ಠಿಕೋನವಿಲ್ಲದವರು ಪದವಿ ಪೂರ್ವ ಮಟ್ಟದ ಉಪನ್ಯಾಸಕರ ಬೋಧನೆಯ ಪ್ರಾಯೋಗಿಕತೆ ಹಾಗೂ ಪಠ್ಯ ಮೌಲ್ಯವನ್ನು ಪರೀಶೀಲಿಸಲು ಸಾಧ್ಯವಿಲ್ಲ. ಹಾಗಾಗಿ, ಅ. 18ರಂದು ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಾರೆ. ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘದಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನಿಡಿದ್ದಾರೆ.

ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಕೊತ್ತಿಪುರ ಜಿ. ಶಿವಣ್ಣ, ಉಪಾಧ್ಯಕ್ಷ ಕೆ.ಜಿ. ಸತೀಶ್, ಕಾರ್ಯದರ್ಶಿ, ಡಾ. ದೊಡ್ಡಬೋರಯ್ಯ, ಖಜಾಂಚಿ ಬಿ. ಮಹೇಶ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.