ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದೂರು: ಸಂಭ್ರಮದಿಂದ ಶಾಲೆಗೆ ಬಂದ ಪುಟಾಣಿಗಳು

Published 29 ಮೇ 2024, 13:55 IST
Last Updated 29 ಮೇ 2024, 13:55 IST
ಅಕ್ಷರ ಗಾತ್ರ

ಕುದೂರು: ಹೋಬಳಿಯ ಬೆಟ್ಟಹಳ್ಳಿ ಕಾಲೋನಿ ಶಾಲಾ ವಿದ್ಯಾರ್ಥಿಗಳು ಶಾಲಾರಂಭದ ಮೊದಲ ದಿನವೇ ಶಿಸ್ತಿನ ಸಿಪಾಯಿಗಳಂತೆ ಸಂತಸದಿಂದ ಶಾಲೆಗೆ ಆಗಮಿಸಿದರು.

ಮಕ್ಕಳನ್ನು ಮುಖ್ಯ ಶಿಕ್ಷಕ ರಘುಪತಿ ಬರಮಾಡಿಕೊಂಡರು. ನಂತರ ಅಡುಗೆ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿಯ ನೆರವಿನೊಂದಿಗೆ ಶಾಲಾ ಕೊಠಡಿ, ಅಡುಗೆ ಕೋಣೆ ಸಿಂಟೆಕ್ಸ್ ಅನ್ನು ಸ್ವಚ್ಛಗೊಳಿಸಿದರು. ವಿದ್ಯಾರ್ಥಿಗಳು ಶಾಲಾವರಣದಲ್ಲಿನ ಕಸ ಕಡ್ಡಿಗಳನ್ನು ಆಯ್ದು ಆಟವಾಡಿದರು.

ಕುದೂರು ಹೋಬಳಿಯ ಬೆಟ್ಟಹಳ್ಳಿ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.
ಕುದೂರು ಹೋಬಳಿಯ ಬೆಟ್ಟಹಳ್ಳಿ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.

ಮುಖ್ಯ ಶಿಕ್ಷಕ ರಘುಪತಿ ಮಾತನಾಡಿ, ಮಕ್ಕಳು ಮೊದಲ ದಿನದಿಂದಲೇ ಶೇಕಡ ನೂರರಷ್ಟು ಹಾಜರಾಗಿರುವುದು ಉತ್ತಮ ಬೆಳವಣಿಗೆ. ನಮ್ಮ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಉತ್ಸುಕತೆಯಿಂದ ಮಾಡಲು ಪ್ರೇರಣೆ ನೀಡಿದೆ ಎಂದರು.

ಶಾಲಾ ಪ್ರಾರಂಭೋತ್ಸವ ಮೇ 31ಕ್ಕೆ: ಮೇ 29 ಮತ್ತು 30 ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದ ಅಡಿಯಲ್ಲಿ ಶಾಲಾವರಣ, ತರಗತಿ ಕೊಠಡಿ, ಅಡುಗೆ ಕೋಣೆ, ಆಟದ ಮೈದಾನ ಹಾಗೂ ಸಿಂಟೆಕ್ಸ್ ಸ್ವಚ್ಛಗೊಳಿಸಲಾಗಿದೆ. ಮೇ 31ರಂದು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಸಿಹಿ ವಿತರಣೆಯ ಜತೆಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ನೀಡಲಾಗುತ್ತದೆ.

ಕುದೂರು ಹೋಬಳಿಯ ಕಾಗಿಮಡು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು.
ಕುದೂರು ಹೋಬಳಿಯ ಕಾಗಿಮಡು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT