‘ಸಾಧಿಸುವ ಹಠ, ಛಲ ಇರಲಿ’

ಬುಧವಾರ, ಜೂಲೈ 17, 2019
26 °C

‘ಸಾಧಿಸುವ ಹಠ, ಛಲ ಇರಲಿ’

Published:
Updated:
Prajavani

ಕನಕಪುರ: ಓದಿನ ಸಮಯದಲ್ಲಿ ವಿದ್ಯಾರ್ಥಿಗಳು ಬೇರೆಡೆ ಗಮನಹರಿಸಬಾರದು ಎಂದು ಸ್ಪಂದನಾ ಟ್ರಸ್ಟ್‌ ಅಧ್ಯಕ್ಷ ಮುತ್ತಣ್ಣ ಹೇಳಿದರು.

ನಗರದ ಎಕ್ಸ್‌ ಮುನಿಷಿಪಲ್‌ ಕಾಲೇಜಿನಲ್ಲಿ ಬಿಡದಿ ಸ್ಪಂದನಾ ಟ್ರಸ್ಟ್‌ ವತಿಯಿಂದ ಕಾಲೇಜಿನ ಟಾಪರ್‌ ಎಂ.ಸೂರ್ಯಕುಮಾರ್‌ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ₹10ಸಾವಿರ ಧನಸಹಾಯ ನೀಡಿ ಮಾತನಾಡಿದರು.

ತರಗತಿಯಲ್ಲಿ ಎಷ್ಟೇ ವಿದ್ಯಾರ್ಥಿಗಳಿದ್ದರೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮಾತ್ರ ವಿಶೇಷರಾಗುತ್ತಾರೆ. ತರಗತಿಯಲ್ಲಿ ಎಲ್ಲರಿಗೂ ಒಂದೇ ರೀತಿ ಶಿಕ್ಷಣ ಸಿಕ್ಕರೂ ಎಲ್ಲರೂ ಸಾಧನೆ ಮಾಡುವುದಿಲ್ಲ. ಸಾಧಿಸಬೇಕೆಂಬ ಹಠ ಮತ್ತು ಛಲ ಇದ್ದವರು ಮಾತ್ರ ಸಾಧಕರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸ್ಪಂದನಾ ಚಾರಿಟಬಲ್‌ ಟ್ರಸ್ಟ್‌ನ ಪದಾಧಿಕಾರಿಗಳಾದ ಭೈರೇಗೌಡ, ರವಿಕುಮಾರ್‌, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !