ಬಿಡದಿ, ಚನ್ನಪಟ್ಟಣಕ್ಕೆ ಲಗ್ಗೆ ಇಟ್ಟ ಆನೆಗಳು

ರಾಮನಗರ: ಬಿಡದಿಯ ಬಾಲಾಜಿ ಲೇಔಟ್ನಲ್ಲಿ ಭಾನುವಾರ ಮುಂಜಾನೆ ಆನೆಗಳು ಕಾಣಿಸಿಕೊಂಡಿವೆ.
ರೈಲು ನಿಲ್ದಾಣದ ಹಿಂಭಾಗ ಇರುವ ಬಡಾವಣೆಯಲ್ಲಿ ಎರಡು ಆನೆಗಳು ಓಡಾಡುತ್ತಿವೆ. ಅದರಲ್ಲಿ ಒಂದು ಆನೆಗೆ ಗಾಯವಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಆನೆಯನ್ನು ಕಾಡಿಗೆ ಕಳುಹಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಎನ್.ಆರ್. ಕಾಲೊನಿ ಸುತ್ತಲಿನ ಜಮೀನಿನಲ್ಲಿ ಭಾನುವಾರ ಆನೆಗಳ ಹಿಂಡು ಪ್ರತ್ಯಕ್ಷ ಆಗಿದೆ. ಹೊಲದಲ್ಲಿನ ಬೆಳೆಗಳನ್ನು ಮೇಯುತ್ತ ಗಜಪಡೆ ಅತ್ತಿಂದಿತ್ತ ಸಂಚಾರ ನಡೆಸಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.
ಬಿಡದಿ, ಚನ್ನಪಟ್ಟಣಕ್ಕೆ ಲಗ್ಗೆ ಇಟ್ಟ ಆನೆಗಳು#Elephants #Bidadi #Channapatna pic.twitter.com/l3JeOZ16H1
— ಪ್ರಜಾವಾಣಿ | Prajavani (@prajavani) July 18, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.