ಗುರುವಾರ , ಆಗಸ್ಟ್ 11, 2022
27 °C
ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

ಬಸ್‌ಪಾಸ್‌ ಅವಧಿ ವಿಸ್ತರಿಸಿ; ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ ಮಾಡುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ನಗರದ ಜಿಲ್ಲಾ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಸಂಚಾಲಕ ಸುಹಾಸ್ ಮಾತನಾಡಿ, ಕೆಎಸ್‌ಆರ್‌ಟಿಸಿಯು 2021-2022 ಶೈಕ್ಷಣಿಕ ವರ್ಷದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿರುವ ಬಸ್‌ ಪಾಸ್‌ ಈ ತಿಂಗಳ 30ಕ್ಕೆ ಮುಕ್ತಾಯವಾಗಲಿದೆ. ಪ್ರತಿವರ್ಷ ಜೂನ್‌ನಿಂದ ಮೇ ವರೆಗೆ ಬಸ್ ಪಾಸ್ ಅವಧಿ ಇರುತ್ತಿತ್ತು. ಆದರೆ ಈ ವರ್ಷ ಪದವಿ, ಡಿಪ್ಲೊಮಾ, ಕಾನೂನು , ನರ್ಸಿಂಗ್‌, ಪ್ಯಾರಾಮೆಡಿಕಲ್ ಮೊದಲಾದ ಕೋರ್ಸ್‌ಗಳ 2,4,6 ಮಿಸ್ಟರ್ ತರಗತಿಗಳು ಜೂನ್ ತಿಂಗಳಿನಿಂದ ಆರಂಭವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂದು ದೂರಿದರು.

ಕೋವಿಡ್ ಕಾರಣಕ್ಕೆ ಕಳೆದ ಶೈಕ್ಷಣಿಕ ವರ್ಷದಲ್ಲಿ ತರಗತಿ ಏರುಪೇರು ಆಗಿದೆ. ಒಂದು ಸಮಿಸ್ಟರ್‌ನಲ್ಲಿ ಮಾತ್ರ ವಿದ್ಯಾರ್ಥಿಗಳು ಬಸ್‍ಪಾಸ್ ಉಪಯೋಗಿಸಿದ್ದಾರೆ. ಅದರ ಅವಧಿಯು ಈ ತಿಂಗಳ 30ಕ್ಕೆ ಮುಗಿಯಲಿದೆ. ಹಾಗಾಗಿ ಶೈಕ್ಷಣಿಕ ವರ್ಷ ಮುಗಿಯುವವರೆಗೂ ಪಾಸ್ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿದರು.

ಈ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಸಹ ಕಾರ್ಯದರ್ಶಿ ಜ್ಞಾನೇಶ್, ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು