ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಗೆ ಒಪ್ಪದ ಕುಟುಂಬದವರು– ರೈಲಿಗೆ ತಲೆ ಕೊಟ್ಟು ಯುವ ಪ್ರೇಮಿಗಳ ಆತ್ಮಹತ್ಯೆ

ಕುಂಬಾಪುರ ರೈಲ್ವೆ ಗೇಟ್ ಬಳಿ ಘಟನೆ
Published 12 ಆಗಸ್ಟ್ 2023, 4:41 IST
Last Updated 12 ಆಗಸ್ಟ್ 2023, 4:41 IST
ಅಕ್ಷರ ಗಾತ್ರ

ರಾಮನಗರ: ಪ್ರೀತಿಗೆ ತಮ್ಮ ಕುಟುಂಬದವರು ಒಪ್ಪಲಿಲ್ಲ ಎಂದು ನೊಂದುಕೊಂಡು ಪ್ರೇಮಿಗಳಿಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ಕುಂಬಾಪುರ ರೈಲ್ವೆ ಗೇಟ್ ಬಳಿ ಶನಿವಾರ ನಡೆದಿದೆ‌.

ನೆಲಮಂಗಲ ನವ್ಯ (19) ಮತ್ತು ಹರ್ಷವರ್ಧನ (20) ಮೃತ ಪ್ರೇಮಿಗಳು. ಬೈಕ್ ನಲ್ಲಿ ಬಂದಿರುವ ಪ್ರೇಮಿಗಳು, ರೈಲ್ವೆ ಗೇಟ್ ಬಳಿ ಬೈಕ್ ನಿಲ್ಲಿಸಿ ಹಳಿ ಮೇಲೆ ಮಲಗಿದ್ದಾರೆ.

ಘಟನೆಯಲ್ಲಿ ಇಬ್ಬರ ದೇಹ ಛಿದ್ರವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಚನ್ನಪಟ್ಟಣ ರೈಲ್ವೆ ಪೊಲೀಸರು, ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT