ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರಿಕೆ: ತಾಂತ್ರಿಕತೆ ಅಳವಡಿಸಿಕೊಳ್ಳಲು ಸಲಹೆ

ಮೀನು ಕೃಷಿಕರ ದಿನಾಚರಣೆ
Last Updated 10 ಜುಲೈ 2019, 12:49 IST
ಅಕ್ಷರ ಗಾತ್ರ

ರಾಮನಗರ: ರೇಷ್ಮೆ ಮತ್ತು ಹೈನುಗಾರಿಕೆಯಂತೆ ಮೀನುಗಾರಿಕೆಯು ಯಶಸ್ವಿ ಆಗಬೇಕಾದರೆ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಲ್ಲೈ ಮುಹಿಲನ್ಹೇಳಿದರು.

ಬಿಡದಿಯ ನಲ್ಲಿಗುಡ್ಡೆ ಕೆರೆಯ ಮೀನು ಮರಿ ಪಾಲನ ಕೇಂದ್ರದಲ್ಲಿ ಬುಧವಾರ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ಮೀನು ಕೃಷಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ ಮಹಿಳೆಯರುತಮ್ಮನ್ನು ತೊಡಗಿಸಿಕೊಂಡ ಕಾರಣದಿಂದಾಗಿಯೇ ರೇಷ್ಮೆ ಮತ್ತು ಹೈನುಗಾರಿಕೆ ಯಶಸ್ಸು ಕಂಡಿದೆ. ಹೈನುಗಾರಿಕೆ ಅವಲಂಬಿಸಿರುವ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಬಲಿಷ್ಠವಾಗಿ ಬೆಳೆದಿವೆ. ಅದರಂತೆಯೇ ಮೀನುಗಾರರು ಸಂಘಗಳನ್ನು ರಚನೆ ಮಾಡಿಕೊಳ್ಳಬೇಕು. ಮೀನುಗಾರಿಕೆಗೆ ಪೂರಕ ವ್ಯವಸ್ಥೆಗಳಿದ್ದು, ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು. ಇದಕ್ಕಾಗಿ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.

‘ಮೀನುಗಾರಿಕೆ ಇಲಾಖೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರೇ ಅýಕಾರಿಗಳಾಗಿ ಬಂದಿದ್ದಾರೆ. ಅವರಲ್ಲಿಯು ಸಾಕಾಷ್ಟು ಜ್ಞಾನ, ಆಲೋಚನೆಗಳು ಇವೆ. ಅವುಗಳನ್ನು ಕಾರ್ಯಗತಗೊಳ್ಳುವಂತೆ ಮಾಡಬೇಕಿದೆ.ಬೆಂಗಳೂರು ನಗರ ಸನಿಹದಲ್ಲಿಯೇ ಇರುವ ಕಾರಣ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ’ ಎಂದು ಹೇಳಿದರು.

ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಹೇಶ್ ಮಾತನಾಡಿ, ಸರ್ಕಾರ ಹಾಗೂಮೀನು ಕೃಷಿ ಇಲಾಖೆ ಮೀನು ಕೃಷಿಕರಿಗಾಗಿ ವೈಜ್ಞಾನಿಕ ತಂತ್ರಗಾರಿಕೆಯಿಂದ ಮೀನು ಕೃಷಿ ಮಾಡಲು ವಿವಿಧ ಹೊಸ ಹೊಸ ಮೀನಿನ ತಳಿಗಳನ್ನು ಸಂಶೋಧಿಸಿ ಉತ್ಪಾದಿಸಲಾಗುತ್ತಿದೆ ಎಂದರು.

ಕೃಷಿಕರಿಗೆ ಹೆಚ್ಚು ಇಳುವರಿ ಮತ್ತು ಆದಾಯ ತಂದುಕೊಡುವಂತಹ ಮೀನಿನ ಮರಿಯನ್ನು ವಿತರಿಸಲಾಗುತ್ತಿದೆ. ರೈತರು ತಮ್ಮ ಜಾಗದ ಕೃಷಿ-ಹೊಂಡ, ಕೆರೆಗಳಲ್ಲಿ ಮೀನು ಸಾಕಣೆಮಾಡಬಹುದಾಗಿದೆ ಎಂದರು.

ಮೀನು ಕೃಷಿ ಅನುಸರಿಸುವುದರಿಂದ ಉದ್ಯೋಗ ಸೃಷ್ಟಿಯಾಗಿ, ಜಲಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡಂತಾಗುತ್ತದೆ. ಜನರ ಆರೋಗ್ಯ ರಕ್ಷಣೆಗಾಗಿ ಪೌಷ್ಠಿಕ ಆಹಾರದ ಉತ್ಪಾದನೆಯಾಗುತ್ತದೆ. ಅಲ್ಲದೆಗೃಹಾಲಂಕಾರಕ್ಕಾಗಿ ಅಲಂಕಾರಿಕ ಮೀನು ಮರಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಯರಾಮ್ ಮಾತನಾಡಿ, ಮೀನು ಕೃಷಿಕರು ಮೀನುಗಳಿಗೆ ಸಾವಯವ ಆಹಾರವನ್ನು ಕೊಟ್ಟರೆ ಮೀನು ಸಾಕಣೆ ಕೆರೆಯ ನೀರು ಶುದ್ಧವಿರುತ್ತದೆ. ಮೀನನ್ನು ಸೇವಿಸಿದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ಮೀನುಕೃಷಿಕರು ಸರ್ಕಾರ ಮತ್ತು ಇಲಾಖೆ ನೀಡುವ ಸವಲತ್ತು ಹಾಗೂ ಮಾಹಿತಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ , ಮೀನುಗಾರಿಕೆ ಇಲಾಖೆ ರಾಮನಗರ ತಾಲೂಕು ಸಹಾಯಕ ನಿರ್ದೇಶಕ ಮಹಾಂತೇಶ್ , ಕನಕಪುರ ಸಹಾಯಕ ನಿರ್ದೇಶಕ ಮುನಿವೆಂಕಟಪ್ಪ , ಚನ್ನಪಟ್ಟಣಸಹಾಯಕ ನಿರ್ದೇಶಕ ಯೋಗಾನಂದ್ , ಮಾಗಡಿ ಸಹಾಯಕ ನಿರ್ದೇಶಕ ಯೋಗೇಶ್ , ಹಿರಿಯ ಮೇಲ್ವಿಚಾರಕ ರಾಜನಾಯಕ್ , ನಲ್ಲಿಗುಡ್ಡೆ ಕೆರೆಯ ಮೀನು ಮರಿ ಪಾಲನ ಕೇಂದ್ರದ ಸಿಬ್ಬಂದಿ ಭೀಮೇಶ್ಉಪಸ್ಥಿತರಿದ್ದರು.

**

ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ಮೀನು ಸಾಕಣೆಯಂತಹ ಉಪಕಸುಬುಗಳನ್ನು ಅಳವಡಿಸುವುದರಿಂದ ಆರ್ಥಿಕವಾಗಿ ಸಬಲರಾಗಬಹುದು
- ಮುಲ್ಲೈ ಮುಹಿಲನ್,ಸಿಇಒ, ರಾಮನಗರ ಜಿ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT