ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಗದ ಮರ ಕಳವು: ಐವರ ಬಂಧನ

Last Updated 2 ನವೆಂಬರ್ 2020, 2:21 IST
ಅಕ್ಷರ ಗಾತ್ರ

ಕನಕಪುರ: ಜಮೀನುಗಳಲ್ಲಿ ಬೆಳೆದಿದ್ದ ತೇಗದ ಮರಗಳನ್ನು ರಾತ್ರಿವೇಳೆ ಕಡಿದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಮಳಗಾಳು ಗ್ರಾಮದ ಮುನಿರಾಜು (33), ಮಂಜುನಾಥ್‌ (40), ಮುತ್ತುರಾಜು (35), ರಾಜು (50), ಮುತ್ತುಸ್ವಾಮಿ (53) ಬಂಧಿತರು. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಿದ್ದಾರೆ.

ಬಂಧಿತರಿಂದ ಮರ ಸಾಗಾಣಿಕೆ ಮಾಡಲು ಬಳಸುತ್ತಿದ್ದ ಟೆಂಪೊ, ಸ್ಕೂಟರ್‌ ಹಾಗೂ ಕಳ್ಳತನ ಮಾಡಿದ್ದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.ಆರೋಪಿಗಳು ತಂಡ ಕಟ್ಟಿಕೊಂಡ ಜಮೀನುಗಳಲ್ಲಿ ಬೆಳೆದಿರುವ ತೇಗದ ಮರಗಳನ್ನು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಟೆಂಪೊದಲ್ಲಿ ತುಂಬಿಕೊಂಡು ಸಾಮಿಲ್‌ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ದ್ಯಾಪೇಗೌಡನದೊಡ್ಡಿ, ಚಿಕ್ಕೇನಹಳ್ಳಿ, ಬಟ್ಟಲುಗುಂಡಪ್ಪ ದೇವಸ್ಥಾನದ ಬಳಿಯ ಜಮೀನುಗಳಲ್ಲಿ ತೇಗದ ಮರಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಸ್ಥಳಗಳಲ್ಲಿ ಮರ ಕಳ್ಳತನವಾಗಿರುವ ಬಗ್ಗೆ ಸಂಬಂಧಪಟ್ಟ ರೈತರು ಈ ಹಿಂದೆ ದೂರಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT