ಭಾನುವಾರ, ಫೆಬ್ರವರಿ 23, 2020
19 °C

‘ಗ್ರಾಮಸಭೆ ಅಭಿವೃದ್ಧಿಗೆ ಸೂಕ್ತ ವೇದಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಗ್ರಾಮಸಭೆಗಳು ಗ್ರಾಮಗಳ ಅಭಿವೃಧ್ಧಿಗೆ ಸೂಕ್ತ ವೇದಿಕೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾರ್ಗದರ್ಶಿ ಅಧಿಕಾರಿ ವೈ.ಬಿ. ಪ್ರಸನ್ನಕುಮಾರ್ ಹೇಳಿದರು.

ಇಲ್ಲಿನ ವಿಭೂತಿಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ 2019-20 ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಎರಡನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮಗಳ ಸರ್ವತೋಮುಖ ಅಭಿವೃಧ್ಧಿಗೆ ವಿಶೇಷ ಗ್ರಾಮಸಭೆಗಳು ಉಪಯುಕ್ತವಾಗಿವೆ. ಕಂದಾಯ, ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ, ಪಶು ಸಂಗೋಪನೆ, ಸಮಾಜ ಕಲ್ಯಾಣ, ರೇಷ್ಮೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಗ್ರಾಮಸಭೆಗಳಲ್ಲಿ ಹಾಜರಿರುವುದರಿಂದ ಇಲಾಖೆಗಳ ಸಂಪೂರ್ಣ ಮಾಹಿತಿ ಸ್ಥಳದಲ್ಲೇ ಸಿಗುತ್ತದೆ. ಇದರಿಂದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿಕೊಳ್ಳಬಹುದು ಎಂದರು.

ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲ್ಲೂಕು ಸಂಚಾಲಕಿ ಶಿವಮ್ಮ ಮಾತನಾಡಿ, ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ದನದ ಕೊಟ್ಟಿಗೆ 17, ರೇಷ್ಮೆ ಇಲಾಖೆ ಕೆಲಸಗಳು 33, ಕೃಷಿ ಇಲಾಖೆ 12, ಅರಣ್ಯ 11, ಚೆಕ್‍ಡ್ಯಾಂ 12, ಕೆರೆ ಅಭಿವೃದ್ಧಿ ಹೂಳೆತ್ತುವುದು 2, ತಡೆಗೋಡೆ 4 ಕೆಲಸಗಳನ್ನು ನಿರ್ವಹಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಶಿವಾನಂದ, ಉಪಾಧ್ಯಕ್ಷೆ ಸುಂದ್ರಮ್ಮ ರಾಜಣ್ಣ, ಪಿಡಿಒ ಬೆಟ್ಟಸ್ವಾಮಿ ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಎಂ. ಶಿವಲಿಂಗಪ್ರಸಾದ್, ಕೃಷ್ಣಮೂರ್ತಿ, ನರಸಿಂಹಯ್ಯ, ಚಂದ್ರಮ್ಮ, ಶಿವಮ್ಮ, ರೇಷ್ಮೆ ಅಧಿಕಾರಿ ತಿಮ್ಮೇಗೌಡ, ಕೃಷಿ ಅಧಿಕಾರಿ ಪರುಶುರಾಮ್, ಕಾರ್ಯದರ್ಶಿ ಪದ್ಮಯ್ಯ, ಶಿಕ್ಷಕ ಸೋಮಶೇಖರ್, ಮಂಜುನಾಥ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)