ಹಾರೋಹಳ್ಳಿ: ತಾಲ್ಲೂಕಿನ ಮರಳವಾಡಿ ಗ್ರಾಮದ ಚಿಕ್ಕಮರಳವಾಡಿ ಸಮೀಪದ ರೈತ ಪ್ರಕಾಶ್ ಹೆಬ್ಬಾರ್ ಅವರ ತೋಟದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದೆ.

ಎರಡು ದಿನಗಳ ಹಿಂದೆ ಸಂಜೆ 7ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ತಡರಾತ್ರಿವರೆಗೂ ಉರಿದು, ಸುಮಾರು 2ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಲವು ಬೆಳೆಗಳು ಸುಟ್ಟು ಕರಕಲಾಗಿದೆ. ಬೆಂಕಿಯಿಂದ 60 ಬಾಳೆ ಗಿಡ, 20 ಹಣ್ಣಿನ ಗಿಡ, 10 ತೆಂಗಿನ ಮರ, 20 ಮಾವಿನ ಮರ ಮತ್ತು 30 ತೇಗಿನ ಗಿಡಗಳು ಸಂಪೂರ್ಣವಾಗಿ ನಾಶವಾಗಿವೆ. ತೋಟದಲ್ಲಿ ಅಳವಡಿಸಿದ್ದ ಡ್ರಿಪ್ ಪೈಪ್ಗಳು ಬೆಂಕಿಗಾಹುತಿಯಾಗಿವೆ.

ಈ ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಈ ಅನಾಹುತಕ್ಕೆ ಯಾರನ್ನು ಹೊಣೆ ಮಾಡಬೇಕೆಂದು ತಿಳಿಯುತ್ತಿಲ್ಲ. ಸೂಕ್ತ ಪರಿಹಾರ ನೀಡಬೇಕೆಂದು ಎಂದು ರೈತ ಪ್ರಕಾಶ್ ಹೆಬ್ಬಾರ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.