‘ನಾಲಿಗೆ ಹರಿಬಿಡಬೇಡ ಬಾಲಕೃಷ್ಣ’

ಬಿಡದಿ: ‘ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರಿನಲ್ಲಿ 3 ಸಲ ಶಾಸಕರಾಗಿದ್ದ ಮಿಸ್ಟರ್ ಬಾಲಕೃಷ್ಣ, ಕಾಂಗ್ರೆಸ್ನಿಂದ ಒಮ್ಮೆ ಗೆದ್ದ ಬಳಿಕ ತಮ್ಮನ್ನು ಬೆಳೆಸಿದವರ ವಿರುದ್ಧ ನಾಲಿಗೆ ಹರಿಬಿಡುತ್ತಿಯ. ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂಬು ಭ್ರಮೆ ನಿನ್ನಲ್ಲಿದೆ. ಕಾಂಗ್ರೆಸ್ ನಾಯಕರನ್ನು ಮೆಚ್ಚಿಸಿ ಮಂತ್ರಿಗಿರಿ ಗಿಟ್ಟಿಸಲು ಹೀಗೆ ಮಾತನಾಡುವುದನ್ನು ಮೊದಲು ಬಿಡು’ ಎಂದು ಜೆಡಿಎಸ್ನ ಮಾಜಿ ಶಾಸಕ ಎ. ಮಂಜುನಾಥ್ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಏಕವಚನದಲ್ಲೇ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಮಾಗಡಿಗೆ ಹೇಮಾವತಿ ನೀರು ಕೊಟ್ಟ ಕುಮಾರಸ್ವಾಮಿ ಅವರ ಬಗ್ಗೆ ಹಗುರ ಮಾತು ಸರಿಯಲ್ಲ. ಕೆರೆಗಳಿಗೆ ನೀರು ತರಲು ಯೋಜನೆ ರೂಪಿಸಿ ಅದಕ್ಕೆ ಶ್ರೀರಂಗ ಯೋಜನೆ ಎಂದು ಹೆಸರಿಟ್ಟಿದ್ದು ಯಾರೆಂದು ತಿಳಿದುಕೊ. ಬೇಕಿದ್ದರೆ ಈ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ದನಿದ್ದೇನೆ. ನೀನು ರೆಡಿನಾ?’ ಎಂದು ಸವಾಲು ಹಾಕಿದರು.

‘ಹುಲಿಕಟ್ಟೆಯಲ್ಲಿ 300 ಎಕರೆ ಅರಣ್ಯವನ್ನು ಒತ್ತುವರಿ ಮಾಡಿಕೊಂಡಿರುವ ಬಾಲಕೃಷ್ಣ, ಬಿಡದಿ ಹೋಬಳಿಯಲ್ಲಿ ಟೌನ್ಶಿಪ್ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನ ಮಾಡಿಸಿ ರೈತರನ್ನ ಬೀದಿಗೆ ತಂದಿದ್ದಾನೆ. ಈ ಬಗ್ಗೆ ನೀನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಜಿಬಿಡಿಎ ಕಚೇರಿಯಲ್ಲಿ ಕಿರುಹೊತ್ತಿಗೆ ಬಿಡುಗಡೆ ಮಾಡುವುದೇ ಸಾಧನೆಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಸದಸ್ಯರಾದ ರಾಕೇಶ್ ಕುಮಾರ್, ಹರಿಪ್ರಸಾದ್ ಮುಖಂಡರಾದ ಗೋಪಾಲ್, ಬಾನಂದೂರು ಜಗದೀಶ್, ರಾಮಕೃಷ್ಣಯ್ಯ, ಪುಟ್ಟಪ್ಪ, ಖಲೀಲ್ ಇದ್ದರು.

‘ಕೊಳಕು ಮಾತು ಬಿಡೊ ಮಂಜ’

ಮಾಗಡಿ: ‘ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ಯೋಜನೆ ಕುರಿತು ಮಾಜಿ ಶಾಸಕ ಎ. ಮಂಜುನಾಥ್ ತಿಕ್ಕಲುತನದ ಹೇಳಿಕೆ ನೀಡಿದ್ದಾನೆ. ಕೊಳಕು ಕ್ರಿಮಿಯಂತಿರುವ ಮಂಜನಿಗೆ ಬಾಲಕೃಷ್ಣ ಬಗ್ಗೆ ಮಾತುಗಳನ್ನಾಡುವ ಯೋಗ್ಯತೆ ಇಲ್ಲ. ವಿರೋಧ ಪಕ್ಷದಲ್ಲಿರುವ ನೀನು ಆರೋಗ್ಯಕರವಾಗಿ ಟೀಕೆ ಮಾಡು. ಅದು ಬಿಟ್ಟು ಏಕವಚನದಲ್ಲಿ ಮಾತನಾಡಿದರೆ ಸರಿ ಇರುವುದಿಲ್ಲ’ ಎಂದು ಶಾಸಕ ಬಾಲಕೃಷ್ಣ ಅವರ ಸಹೋದರ ಎಚ್.ಎನ್. ಅಶೋಕ್ (ತಮ್ಮಾಜಿ) ಹೇಳಿದರು.

ಬಿಡದಿಯಲ್ಲಿ ಬಾಲಕೃಷ್ಣ ವಿರುದ್ದ ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ, ತಾಲ್ಲೂಕಿನ ಮರೂರು ಹ್ಯಾಂಡ್ಪೋಸ್ಟ್ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅಶೋಕ್, ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ‘ಬಾಲಕೃಷ್ಣ ಅವರು ಅರಣ್ಯ ಪ್ರದೇಶ ಒತ್ತುವರಿ ಮಾಡಿದ್ದರೆ, ನೀನು ಶಾಸಕನಾಗಿದ್ದಾಗ ಯಾಕೆ ಪ್ರಕರಣ ದಾಖಲಿಸಿ ತನಿಖೆ ಮಾಡಿಸಲಿಲ್ಲ?’ ಎಂದು ಪ್ರಶ್ನಿಸಿದರು.

‘ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೆ ಬರುವುದಕ್ಕೆ ಮುಂಚೆಯೇ ಬಾಲಕೃಷ್ಣ ಶಾಸಕರಾಗಿದ್ದರು. ನೀನು ಕಾಂಗ್ರೆಸ್ನಲ್ಲಿದ್ದಾಗ ಹೇಮಾವತಿ ಯೋಜನೆಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಅಡ್ಡಗಾಲು ಹಾಕಬಾರದು ಎಂದು ಹೇಳಿದ್ದನ್ನು ಮರೆತಿದ್ದೀಯಾ? ಕ್ಷೇತ್ರಕ್ಕೆ ನೀರು ತರಲು ಶ್ರಮಿಸಿದ್ದು ಯಾರೆಂದು ಜನರಿಗೆ ಗೊತ್ತಿದೆ. ಭೂಮಿ ಮಾರಾಟಕ್ಕೆ ಸಂಬಂಧಿಸಿದಂತೆ ನಿನ್ನ ಮೇಲಿರುವ 420 ಕೇಸ್ಗಳನ್ನು ಮರೆತಿದ್ದೀಯಾ? ಮನೆ ಬಿಟ್ಟು ಬೇರೆ ಎಲ್ಲೋ ಹೋಗಿ ಹೆಣ್ಣು ಮಕ್ಕಳ ಪೂಜೆ ಮಾಡುವವನು ನೀನು. ಇನ್ನಾದರೂ ಗೌರವಯುತವಾಗಿ ಮಾತನಾಡು’ ಎಂದು ಎಚ್ಚರಿಕೆ ನೀಡಿದರು.

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಕಾಂಗ್ರೆಸ್ ಮುಖಂಡರಾದ ಶಿವಪ್ರಸಾದ್, ಬಿ.ಎಸ್. ಕುಮಾರ್, ಶಿವರಾಜು ಶ್ರೀನಿವಾಸ ಮೂರ್ತಿ, ರವೀಶ್ ಇದ್ದರು.

‘ಏಕವಚನ ಬಳಸಿದರೆ ಸುಮ್ಮನಿರಲ್ಲ’

ಮಾಗಡಿ: ‘ಶಾಸಕ ಬಾಲಕೃಷ್ಣ ಅವರ ಹುಲಿಕಟ್ಟೆ ಮನೆತನದ ಬಗ್ಗೆ ನಮಗೆ ಗೌರವವಿದೆ. ಆದರೆ ಅವರ ಸಹೋದರ ಎಚ್.ಎನ್. ಅಶೋಕ್ ಅವರು ನಮ್ಮ ನಾಯಕ ಹಾಗೂ ಮಾಜಿ ಶಾಸಕ ಎ. ಮಂಜುನಾಥ್ ವಿರುದ್ಧ ಏಕವಚನ ಬಳಸುವುದನ್ನು ನಿಲ್ಲಿಸಬೇಕು. ನೀವು ಮತ್ತು ನಿಮ್ಮ ಕಾರ್ಯಕರ್ತರು ಇದೇ ರೀತಿ ಮಾತನಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ’ ಎಂದು ಜೆಡಿಎಸ್ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸಾಗರ್ ಎಚ್ಚರಿಕೆ ನೀಡಿದರು. ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ‘ಅಶೋಕ್ ಅವರು ಎಲ್ಲೆ ಮೀರಿ ತೀರಾ ವೈಯಕ್ತಿಕ ವಿಚಾರಗಳನ್ನು ಮಾತನಾಡುವ ಮೂಲಕ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೊ ಗೊತ್ತಿಲ್ಲ. ಮಂಜುನಾಥ್ ಅವರು ಹೆಣ್ಣಿನ ವಿಚಾರದಲ್ಲಿ ತಪ್ಪು ಮಾಡಿದ್ದಾರೆ ಎಂದು ಯಾವುದೊ ಪ್ರಕರಣವನ್ನು ಕೆದಕುವ ಅವರು ಹೆಣ್ಣು ಮಕ್ಕಳಿಗೆ ಕೊಡುವ ಗೌರವ ಇದೇನಾ’ ಎಂದು ಪ್ರಶ್ನಿಸಿದರು. ‘ಕಾಂಗ್ರೆಸ್ ಕಾರ್ಯಕರ್ತರು ಏಕವಚನದಲ್ಲಿ ಮಾತನಾಡುವ ಜೊತೆಗೆ ಮಾಗಡಿಗೆ ಬಂದರೆ ಬಿಡುವುದಿಲ್ಲ ಎಂದು ಧಮ್ಕಿ ಹಾಕುತ್ತಾರೆ. ನಮ್ಮ ನಾಯಕರು ಏಕಾಂಗಿಯಾಗಿ ಮಾಗಡಿ ತಾಲ್ಲೂಕಿಗೆ ಒಬ್ಬರೇ ಬರುತ್ತಾರೆ. ಅವರ ನಮ್ಮಂತಹವರ ದೊಡ್ಡ ಪಡೆಯೇ ನಿಲ್ಲಲಿದೆ. ಅದ್ಯಾರು ಬಂದು ಅವರನ್ನು ಮುಟ್ಟುತ್ತಾರೊ ನೋಡೋಣ. ಹೇಮಾವತಿ ನೀರು ತಂದ ವಿಚಾರದಲ್ಲಿ ಶಾಸಕ ಬಾಲಕೃಷ್ಣ ಅವರ ಪಾತ್ರವೇನೂ ಇಲ್ಲ’ ಎಂದು ತರಾಟೆಗೆ ತೆಗೆದುಕೊಂಡರು. ಬೆಳಗುಂಬ ವಿಎಸ್ಎಸ್ಎನ್ ಅಧ್ಯಕ್ಷ ರಂಗಣ್ಣಿ ಮುಖಂಡರಾದ ಕುದೂರು ಕಿಟ್ಟಿ ಸುರೇಶ್ ಸುಹೇಲ್ ವಿಜಯಕುಮಾರ್ ಗುಡೆಮಾರನಹಳ್ಳಿ ನಾಗರಾಜು ಸಹ ಸಾಗರ್ ಅವರ ಮಾತಿಗೆ ದನಿಗೂಡಿಸಿದರು. ಸ್ಥಳೀಯ ಮುಖಂಡರು ಇದ್ದರು.

‘ವೈಯಕ್ತಿಕ ನಿಂದನೆ ಬಿಟ್ಟು ದೊಡ್ಡವರಾಗಲಿ’

ಮಾಗಡಿ: ‘ಮಾಜಿ ಶಾಸಕ ಎ. ಮಂಜುನಾಥ್ ಅವರು ನನ್ನ ಬಗ್ಗೆ ಏಕವಚನದಲ್ಲಿ ವೈಯಕ್ತಿಕವಾಗಿ ನಿಂದಿಸಿ ಟೀಕಿಸುವ ಬದಲು ವಿರೋಧ ಪಕ್ಷದ ನಾಯಕನಾಗಿ ಆರೋಗ್ಯಕರವಾಗಿ ಟೀಕೆ–ಟಿಪ್ಪಣಿ ಮಾಡಿ ದೊಡ್ಡವರಾಗಲಿ. ನಾನು ಆರೋಗ್ಯಕರವಾಗಿಯೇ ಸ್ವೀಕರಿಸುತ್ತೇನೆ. ನನ್ನ ತಪ್ಪುಗಳಿದ್ದರೆ ಜನರ ಮುಂದೆ ತಿಳಿಸಲಿ. ಅದಕ್ಕೆ ನಾನು ಸಹ ಸೂಕ್ತ ಪ್ರತಿಕ್ರಿಯೆಯನ್ನು ನೀಡುತ್ತೇನೆ. ಅದು ಬಿಟ್ಟು ವೈಯಕ್ತಿಕ ನಿಂದನೆ ಮಾಡಿದರೆ ಹೇಗೆ? ನಾನು ಸರ್ಕಾರದ ಅಂಗವಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಮಾಜಿ ಶಾಸಕರ ವಿಷಯವನ್ನು ಇಲ್ಲೇ ಬಿಟ್ಟು ಬಿಡುತ್ತೇನೆ. ಮುಂದೆ ಯಾರೇ ದ್ವೇಷದ ಭಾಷಣ ಮಾಡಿದರೂ ಸುಮೊಟೊ ಕೇಸ್ ಬೀಳಲಿದೆ. ಈ ಕುರಿತು ನಮ್ಮ ಸರ್ಕಾರ ತಂದಿರುವ ಮಸೂದೆ ತಂದಿದ್ದು ರಾಜ್ಯಪಾಲರ ಅಂಕಿತಕ್ಕೆ ಕಳಿಸಲಾಗಿದೆ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನನ್ನ ವೈಯಕ್ತಿಕ ವಿಚಾರ ಇಟ್ಟುಕೊಂಡು ಮಿಸ್ಟರ್ ಬಾಲಕೃಷ್ಣ ನೀನು ಎಂಬ ಪದ ಬಳಕೆ ಸರಿಯಲ್ಲ. ಎರಡು ಬಾರಿ ಇದೇ ರೀತಿ ನನ್ನ ವಿರುದ್ಧ ಮಾತನಾಡಿದ್ದರೂ ನಾನು ಪ್ರತಿಕ್ರಿಯಿಸಿರಲಿಲ್ಲ. ನನ್ನ ಕಾರ್ಯಕರ್ತರು ನೀವು ಸುಮ್ಮನೆ ಇರಿ ನಾವು ಮಾತನಾಡುತ್ತೇವೆ ಎಂದು ಹೇಳಿದ ಮೇಲೆ ಅವರು ಪತ್ರಿಕಾಗೋಷ್ಠಿ ನಡೆಸಿ ಏಕವಚನದಲ್ಲಿ ಮಾತನಾಡಿದ್ದಾರೆ. ಅದು ಸರಿಯಲ್ಲ. ಮಂಜುನಾಥ್ ಮೊದಲು ಈ ರೀತಿ ಮಾಡಿದ್ದರಿಂದ ನಮ್ಮ ಕಾರ್ಯಕರ್ತರು ಕೆರಳಿ ಮಾತನಾಡಿದ್ದಾರೆ. ಎರಡೂ ಕಡೆಯವರೂ ಹೀಗೆ ದ್ವೇಷದ ಮಾತುಗಳನ್ನಾಡಿದರೆ ಮುಂದಾಗುವ ಪರಿಣಾಮಕ್ಕೆ ಯಾರು ಹೊಣೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.