ರಾಮನಗರ: ಹರಿಯಾಣ ರಾಜ್ಯದ ಸೋನಿಪತ್ನಲ್ಲಿ ನ. 27ರಿಂದ 30ರವರೆಗೆ ನಡೆಯುವ 35ನೇ ಸಬ್ ಜೂನಿಯರ್ ರಾಷ್ಟ್ರೀಯ ಕಬ್ಬಡಿ ಚಾಂಪಿಯನ್ಶಿಪ್ಗೆ ಭಾಗವಹಿಸಲು ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರ ಸಬ್ ಜೂನಿಯರ್ ರಾಜ್ಯ ಕಬ್ಬಡಿ ತಂಡದ ಆಯ್ಕೆ ಪ್ರಕ್ರಿಯೆ ನ. 9ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಕಂಠೀರವ ಕಬಡ್ಡಿ ಕ್ರೀಡಾಂಗಣ ಬೆಂಗಳೂರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಮ್ಮ ಬೆಂಗಳೂರು ದಕ್ಷಿಣ ಜಿಲ್ಲೆಯಿಂದ 7 ಬಾಲಕರು ಮತ್ತು ಬಾಲಕಿಯರನ್ನು ಕಳುಹಿಸಿ ಕೊಡಲಾಗುವುದು. ಅದಕ್ಕಾಗಿ ಬೆಂಗಳೂರು ದಕ್ಷಿಣ ಅಮೆಚೂರು ಕಬ್ಬಡಿ ಅಸೋಸಿಯೇಷನ್ ವತಿಯಿಂದ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ (ನ. 8) ಮಧ್ಯಾಹ್ನ 3 ಗಂಟೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಹ 16 ವರ್ಷದೊಳಗಿನ ಬಾಲಕ–ಬಾಲಕಿಯರು ಭಾಗವಹಿಸಬಹುದು.

ಬಾಲಕರ ದೇಹದ ತೂಕ 60 ಕೆ.ಜಿ ಹಾಗೂ ಬಾಲಕಿಯರ ದೇಹದ ತೂಕ 55 ಕೆ.ಜಿ ಮೀರಿರಬಾರದು. 2009ರ ನ. 11ರ ನಂತರ ಜನಿಸಿರಬೇಕು. ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರದ ಮೂಲ ಪ್ರತಿಯನ್ನು ತರಬೇಕು. ಹೆಚ್ಚಿನ ಮಾಹಿತಿಗೆ ಅರುಣ್ ಕುಮಾರ್ ಪಿ. ಮೊ: 9901258676 ಹಾಗೂ ಸತೀಶ್ ನಾಯಕ್ ಮೊ:8867676784 ಸಂಪರ್ಕಿಸಬಹುದು ಎಂದು ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.