ಕನಕಪುರ: ಖಾಲಿ ಮದ್ಯದ ಬಾಟಲಿಗಳನ್ನು ಮನೆಯ ಮುಂದೆ ಹಾಕುವುದನ್ನು ಪ್ರಶ್ನಿಸಿದ ಕುಟುಂಬ ಸದಸ್ಯರ ಮೇಲೆ ಗುಂಪು ಕಟ್ಟಿಕೊಂಡು ಮನೆಗೆ ನುಗ್ಗಿ ಹಲ್ಲೆ ಮಾಡಿದ ಆರೋಪದ ಮೇಲೆ ಎಂಟು ಮಂದಿ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ದೊಡ್ಡಾಲಹಳ್ಳಿ ಗ್ರಾಮದ ದೊಡ್ಡಬಸವೇಗೌಡ, ಅವರ ಪತ್ನಿ ರೂಪ, ಮಗ ಸುಮನ್ ಹಲ್ಲೆಗೊಳಗಾದವರು. ಅದೇ ಗ್ರಾಮದ ಅರುಣ್, ವಿಜಯ್, ಶ್ರೇಯಸ್, ಕೀರ್ತಿ, ಶಿವಕುಮಾರ್, ಕರಿಯ, ಶಶಿ, ಗಿರಿ ಇವರ ವಿರುದ್ದ ಪ್ರಕರಣ ದಾಖಲಾಗಿದೆ.

ಮನೆ ಪಕ್ಕದಲ್ಲಿರುವ ಮಾಂಸಾಹಾರಿ ಮಿಲ್ಟ್ರಿ ಹೋಟೆಲ್ನ ಖಾಲಿ ಮದ್ಯದ ಬಾಟಲಿಗಳನ್ನು ತಂದು ತಮ್ಮ ಮನೆ ಮುಂದೆ ಹಾಕದಂತೆ ತಾಕೀತು ಮಾಡಿದ ಕಾರಣ ಸಿಟ್ಟಾದ ಆರೋಪಿಗಳು ಮನೆಗೆ ನುಗ್ಗಿ ದೊಣ್ಣೆ ಮತ್ತು ರಾಡ್ನಿಂದ ಹಲ್ಲೆ ನಡೆಸಿದರು. ಕೊಲೆ ಬೆದರಿಕೆ ಹಾಕಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮೇಲೆ ಕಲ್ಲು ಎತ್ತು ಹಾಕಿದರು ಎಂದು ದೊಡ್ಡಬಸವೇಗೌಡರು ದೂರ ನೀಡಿದ್ದಾರೆ. ದೂರಿನ ಮೇರೆಗೆ ಸಾತನೂರು ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.