ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ರಾಜಕಾಲುವೆಯಲ್ಲಿ ತುಂಬಿದ ತ್ಯಾಜ್ಯ

Published 1 ಮೇ 2024, 16:05 IST
Last Updated 1 ಮೇ 2024, 16:05 IST
ಅಕ್ಷರ ಗಾತ್ರ

ಕನಕಪುರ ನಗರದ ಟಿಟಿಸಿ ಕ್ಲಬ್‌ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆಯಲ್ಲಿ ಹೂಳು ತುಂಬಿದ್ದು ಬೃಹದಾಕಾರವಾಗಿ ಗಿಡಗಳು ಬೆಳೆದುಕೊಂಡಿದ್ದು ಕಾಲುವೆಯಲ್ಲಿ ನೀರು ಹರಿಯದೆ ತುಂಬಿಕೊಂಡಿದೆ. ನಿಂತ ನೀರಿನಿಂದ ವಾಸನೆ ಬರುತ್ತಿದ್ದು ಕಾಲುವೆ ಪಕ್ಕದ ಮನೆಗಳಿಗೆ ತೊಂದರೆ ಆಗುತ್ತಿದೆ.

ರಾಜಕಾಲುವೆಯಲ್ಲಿ ತ್ಯಾಜ್ಯ ತುಂಬಿಕೊಂಡ ಮೇಲೆ ನಗರಸಭೆಯವರು ತೆಗೆಸದ ಕಾರಣ ಕಾಲುವೆ ತುಂಬ ತ್ಯಾಜ್ಯ ತುಂಬಿಕೊಂಡಿದ್ದು ಮನೆಗಳ ತ್ಯಾಜ್ಯದ ನೀರು ಕಾಲುವೆಯಲ್ಲಿ ಹರಿಯುತ್ತಿಲ್ಲ.

ರಾಜಕಾಲುವೆಯಲ್ಲಿ ತುಂಬಿರುವ ತ್ಯಾಜ್ಯವನ್ನು ತೆಗೆಯಲು ನಗರಸಭೆಯಲ್ಲಿ ಚಿಕ್ಕದಾದ ಜೆಸಿಬಿ ಯಂತ್ರಗಳಿವೆ, ಹೂಳು, ತ್ಯಾಜ್ಯ ತೆಗೆಯಲು ನಗರಸಭೆಯವರಿಗೆ ಈಗಾಗಲೆ ಮನವಿ ಮಾಡಿದ್ದೇವೆ. ಆದರೆ, ಈ ವರೆಗೂ ತ್ಯಾಜ್ಯವನ್ನು ತೆರವುಗೊಳಿಸಿಲ್ಲ.

ಮುಂದೆ ಮಳೆ ಬಂದರೆ ದೊಡ್ಡ ಪ್ರಮಾಣದಲ್ಲಿ ಕಾಲುವೆಗೆ ನೀರು ಬರಲಿದ್ದು ಆಗ ನೀರು ಕಾಲುವೆಯಲ್ಲಿ ಹರಿಯದೆ ಮನೆಗಳಿಗೆ ನುಗ್ಗಲಿದೆ. ನಗರಸಭೆಯವರು ಪರಿಶೀಲಿಸಿ ಶೀಘ್ರವಾಗಿ ಕಾಲುವೆಯಲ್ಲಿನ ತ್ಯಾಜ್ಯ ತೆಗೆಸಬೇಕು, ನೀರು ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು.

ಕಾಲುವೆ ಅಕ್ಕಪಕ್ಕದ ನಿವಾಸಿಗಳು, ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT