ಸಮ್ಮೇಳನದ ಮೆರವಣಿಗೆಗೆ ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ ಅವರು ಚಾಲನೆ ನೀಡಿದರು
ಕನ್ನಡ ಸಾಹಿತ್ಯ ವಲಯದಲ್ಲಿ ಚುಟುಕು ಸಾಹಿತ್ಯವು ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಚುಟುಕಾದ ಸಾಲುಗಳು ಮನಸ್ಸಿನಲ್ಲಿ ವಿಚಾರದ ಕಿಡಿ ಹೊತ್ತಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅದೇ ಕಾರಣಕ್ಕೆ ಚುಟುಕುಗಳು ಓದುಗರನ್ನು ಆಕರ್ಷಿಸುತ್ತವೆ
– ಡಾ. ಎಂ.ಜಿ.ಆರ್. ಅರಸು ರಾಜ್ಯಾಧ್ಯಕ್ಷ ಚುಟುಕು ಸಾಹಿತ್ಯ ಪರಿಷತ್ತು
ಗಮನ ಸೆಳೆದ ಮೆರವಣಿಗೆ
ಸಮ್ಮೇಳನದ ಅಂಗವಾಗಿ ಪಟ್ಟಣದ ಐಜೂರು ಬಡಾವಣೆಯ ಮಲ್ಲೇಶ್ವರ ದೇವಾಲಯದ ಆವರಣದಿಂದ ಎಕ್ಸ್‌ಪರ್ಟ್ ಕಾಲೇಜಿನ ಆವರಣದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ 120 ಮೀಟರ್ ಉದ್ದದ ಕನ್ನಡ ಭಾವುಟವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಲಾಯಿತು. ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.