ಶುಕ್ರವಾರ, ಮೇ 20, 2022
25 °C

ಕನ್ನಡ ಧಮನಿಯಲ್ಲಿ ಹರಿಯುತ್ತಿರುವ ಶಕ್ತಿ: ಸಿಂ.ಲಿಂ. ನಾಗರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಕನ್ನಡ ಬರೀ ಭಾಷೆಯಲ್ಲ‌. ನಮ್ಮ ದೇಹದ ಧಮನಿ, ಧಮನಿಗಳಲ್ಲಿ ಹರಿಯುತ್ತಿರುವ ಶಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಗಾಂಧಿಭವನದ ಕುವೆಂಪು ಪ್ರತಿಮೆ ಬಳಿ ತಾಲ್ಲೂಕು ಕಸಾಪ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನ ಕೊಟ್ಟಂತಹ, ಬದುಕು ಕಲಿಸಿದ ಭಾಷೆ ಕನ್ನಡ. ಕನ್ನಡವಿಲ್ಲದೆ ನಾವಿಲ್ಲ. ಕನ್ನಡ ಭಾಷೆ ದೈಹಿಕವಾಗಿ, ಮಾನಸಿಕವಾಗಿ ಎಲ್ಲ ರೀತಿಯಲ್ಲೂ ನಮ್ಮನ್ನು ಆವರಿಸಿದೆ ಎಂದರು.

ಕನ್ನಡ ಮಿತ್ರ ಸಂಘದ ಅಧ್ಯಕ್ಷ ಎಂ.ಸಿ. ಮಲ್ಲಯ್ಯ ಮಾತನಾಡಿ, ಎರಡು ಸಾವಿರ ವರ್ಷಗಳಿ
ಗಿಂತಲೂ ಪ್ರಾಚೀನವಾದ ಕನ್ನಡ ಭಾಷೆಯನ್ನು ಎಲ್ಲರೂ ಸುಲಲಿತವಾಗಿ ಕಲಿಯಬಹುದು. ಸಾವಿರಾರು ಪರಭಾಷಿಕರು ಕರ್ನಾಟಕದಲ್ಲಿ ನೆಲೆಸಿ ನಮ್ಮ ಭಾಷೆ ಕಲಿತು ಮಾತೃಭಾಷೆಯ ರೀತಿ ಬಳಸುತ್ತಿರುವುದನ್ನು ಗಮನಿಸಬಹುದು ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಮತ್ತೀಕೆರೆ ಬಿ. ಚಲುವರಾಜು ಮಾತನಾಡಿ, ಕನ್ನಡಿಗರು ನವೆಂಬರ್ ತಿಂಗಳಿಗೆ ಸೀಮಿತವಾಗಿರದೆ ವರ್ಷಪೂರ್ತಿ ಕನ್ನಡತನವನ್ನು ಮೆರೆದಾಗ ಕನ್ನಡ ರಾಜ್ಯೋತ್ಸವಕ್ಕೆ ಸಾರ್ಥಕತೆ ಸಿಗುತ್ತದೆ. ಸರ್ಕಾರ ಕನ್ನಡಕ್ಕೆ ಹೆಚ್ಚಿನ ಒತ್ತು ಕೊಡಬೇಕು. ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡವನ್ನು ಎಲ್ಲ ಇಲಾಖೆಗಳಲ್ಲೂ ಕಡ್ಡಾಯವಾಗಿ ಅನುಸರಿಸುವಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತರಾದ ಸು.ತ. ರಾಮೇಗೌಡ, ಗೋ.ರಾ. ಶ್ರೀನಿವಾಸ್, ಭಾವಿಪ ಕಾರ್ಯದರ್ಶಿ ಬಿ.ಎನ್. ಕಾಡಯ್ಯ, ಸಾಹಿತಿ ಎಲೆಕೇರಿ ಶಿವರಾಂ, ಶಿಕ್ಷಕರಾದ ಸಿ.ಎಸ್. ಸಿದ್ದಲಿಂಗಯ್ಯ, ಎಲೆಕೇರಿ ಡಿ. ರಾಜಶೇಖರ್, ನಿವೃತ್ತ ಶಿಕ್ಷಕ ಎಂ. ಶಿವರಾಮಯ್ಯ, ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ಅಧ್ಯಕ್ಷ ಶಂಭುಗೌಡ, ಮತ್ತೀಕೆರೆ ವಿ.ಎಸ್.ಎಸ್.ಎನ್. ನಿರ್ದೇಶಕ ಎಚ್.ಆರ್. ರಮೇಶ್, ತಾಲ್ಲೂಕು ಕಸಾಪ ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಪುಟ್ಟರಾಜು, ಗಾಯಕ ಕೆ.ಎಚ್. ಕುಮಾರ್, ಕಸಾಪ ಸದಸ್ಯರಾದ ನಾರಾಯಣಮೂರ್ತಿ, ಎನ್. ಶಂಕರ್, ಲಕ್ಷ್ಮಣ್, ಶಂಕರ್ ಬಾಬು, ಶಿವಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು