ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ: ಚಕ್ರ ಬಸವಣ್ಣ ಪೀಠ ಸರಿಪಡಿಸಿ ಪೂಜೆ

Published 5 ಜುಲೈ 2024, 4:36 IST
Last Updated 5 ಜುಲೈ 2024, 4:36 IST
ಅಕ್ಷರ ಗಾತ್ರ

ಮಾಗಡಿ: ಕೆಂಪೇಗೌಡರು ತಮ್ಮ ತಾಯಿಗಾಗಿ ಸೋಮೇಶ್ವರ ದೇವಸ್ಥಾನದ ಹಿಂಭಾಗದ ಬೆಟ್ಟದ ಮೇಲೆ ನಿರ್ಮಿಸಿದ್ದ ಚಕ್ರ ಬಸವಣ್ಣ ಸ್ವಾಮಿ ಪೀಠವನ್ನು ಹೊಸಹಳ್ಳಿ ಗ್ರಾಮಸ್ಥರು ಸರಿಪಡಿಸಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.

ಒಂದು ತಿಂಗಳ ಹಿಂದೆ ನಿಧಿ ಆಸೆಗಾಗಿ ಕಳ್ಳರು ಚಕ್ರ ಬಸವಣ್ಣ ಸ್ವಾಮಿ ಕೆಳಭಾಗ ಪೀಠವನ್ನು ಹೊಡೆದು ಜರುಗಿಸಲಾಗಿತ್ತು. ಇದಾದ ನಂತರ ಸ್ವಾಮಿಗೆ ಪೂಜೆ ಆಗುತ್ತಿರಲಿಲ್ಲ. ಹಾಗಾಗಿ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳು ದೇವಾಸ್ಥಾನಕ್ಕೆ ಭೇಟಿ ನೀಡಿ ನಮ್ಮಲ್ಲಿ ಯಾವುದೇ ಅನುದಾನವಿಲ್ಲ. ಶಾಸಕ ಹಾಗೂ ಸಂಸದರ ನಿಧಿಯಲ್ಲಿ ಕೆಲಸ ಮಾಡಿಸಿಕೊಳ್ಳಿ ಎಂದು ತಿಳಿಸಿದರು.

ಹೊಸಹಳ್ಳಿ ಗ್ರಾಮಸ್ಥರು ಸ್ವಾಮಿಗೆ ಪ್ರತಿ ವಾರ ಪೂಜೆ ಸಲ್ಲಿಸುತ್ತಿದ್ದು, ವರ್ಷಕ್ಕೆ ಒಮ್ಮೆ ಗ್ರಾಮಸ್ಥರೆಲ್ಲರೂ ಆರತಿ ಸೇವೆ ಸಲ್ಲಿಸುವವರು. ಕಳೆದ ತಿಂಗಳು ಸ್ವಾಮಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದ ಎರಡು ದಿನದ ನಂತರ ಕಳ್ಳರು ನಿಧಿ ಆಸೆಗಾಗಿ ಸ್ವಾಮಿ ಪೀಠವನ್ನು ಹೊಡೆದು ಹಾಕಿದ್ದರು. ಹಾಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಪೀಠವನ್ನು ಸರಿಪಡಿಸಿ ಪೂಜೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT