ರಾಮನಗರ: ನಗರದ ಕೆಂಪೇಗೌಡ ವೃತ್ತದಲ್ಲಿರುವ ಪಟೇಲ್ ಪಬ್ಲಿಕ್ ಆಂಗ್ಲ ಶಾಲೆಯಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಭಾರತ್ ವಿಕಾಸ್ ಪರಿಷತ್ ಹಾಗೂ ಅಲೆಯನ್ಸ್ ಕ್ಲಬ್ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ನರ್ಸರಿ ಶಾಲಾ ಮಕ್ಕಳು ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ಸಿ. ರಾಜು, ‘ಶಾಲಾ ಪೋಷಕರು ತಮ್ಮ ಮಕ್ಕಳನ್ನು ಕೃಷ್ಣ ಮತ್ತು ರಾಧೆ ವೇಷದಲ್ಲಿ ನೋಡುವುದರಲ್ಲಿ ವಿಶೇಷ ಎನಿಸಿದೆ. ಮಕ್ಕಳು ಇಂತಹ ಕಾರ್ಯಕ್ರಮಗಳು ಪಾಲ್ಗೊಳ್ಳುವುದರಿಂದ ಅವರಲ್ಲಿ ಸಂಸ್ಕಾರ ಭಾವನೆ ಬೆಳೆಯುತ್ತದೆ’ ಎಂದರು.

‘ಮಕ್ಕಳು ನಂದಗೋಕುಲದ ಪರಿಸರದಲ್ಲಿ ಬೆಳೆಯಬೇಕು. ಆಗ ಅವರಲ್ಲಿ ಸ್ನೇಹ, ಪ್ರೀತಿ ಹಾಗೂ ಸಹೋದರತ್ವದ ಭಾವನೆ ಬೆಳೆಯಲಿದೆ. ವೇಷಭೂಷಣ ಕಾರ್ಯಕ್ರಮಗಳು ಮಕ್ಕಳಲ್ಲಿ ಪರಂಪರೆಯ ಬಗ್ಗೆ ಅರಿವು ಮೂಡಿಸಲಿದೆ. ಮಕ್ಕಳು ಸಹ ಲವಲವಿಕೆಯಿಂದ ಇರಲು ಸಹಾಯವಾಗುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಲಯನ್ಸ್ ಕ್ಲಬ್ನ ಲಾವಣ್ಯ ಎಂ.ಎಸ್., ಭಾರತ್ ವಿಕಾಸ್ ಪರಿಷತ್ನ ಶೋಭಾ ಜಗದೀಶ್ ಎಂ., ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಎಂ.ಡಿ, ಶಾಲಾ ಸಿಬ್ಬಂದಿ ಹಾಗೂ ಪೋಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.