ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಶಿಕ್ಷಕರಿಗೆ ಗುರುವಂದನೆ

Last Updated 4 ಸೆಪ್ಟೆಂಬರ್ 2022, 5:05 IST
ಅಕ್ಷರ ಗಾತ್ರ

ಮಾಗಡಿ: ‘ಜ್ಞಾನದಿಂದ ಮಾತ್ರ ಮೋಕ್ಷದ ಪಥ ಕಂಡುಕೊಳ್ಳಲು ಸಾಧ್ಯ’ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಗುಡೇಮಾರನಹಳ್ಳಿಯ ಸಿದ್ಧಗಂಗಾ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ 1987-1990ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಅವರು ಮಾತನಾಡಿದರು.

ಬೀಜಕ್ಕೆ ಮೊಳೆಯುವ ಶಕ್ತಿ ಇರುತ್ತದೆ. ಆದರೆ, ತಾನೇ ತಾನಾಗಿ ಮೊಳೆಯಲು ಸಾಧ್ಯವಿಲ್ಲ. ಅದಕ್ಕೆ ನೆಲ, ಜಲದ ಆಸರೆ ಬೇಕು. ಅದೇ ರೀತಿ ಲೌಕಿಕ ಬದುಕಿನಲ್ಲಿ ಇರುವವರನ್ನು ಮುಕ್ತಿಯತ್ತ ಅಭಿಮುಖರನ್ನಾಗಿಸಲು ಜ್ಞಾನಿಯಾದ ಗುರು ಬೇಕು ಎಂದು
ತಿಳಿಸಿದರು.

ಗುರುವಾದವನು ನೆಲ, ಜಲ ನಿರ್ವಹಿಸುವ ಕಾರ್ಯ ಮಾಡುತ್ತಾನೆ. ಆದ್ದರಿಂದ ಗುರು-ಶಿಷ್ಯರದು ತಾಯಿ-ಮಕ್ಕಳ ಸಂಬಂಧ ಇದ್ದಂತೆ. ಗುರು ದಾರಿ ತೋರುತ್ತಾನೆ. ಗುರು ತೋರಿದ ದಾರಿಯಲ್ಲಿ ಸಾಗುವ ಮನುಷ್ಯ ತನ್ನ ಅರಿವಿನ ಬೆಳಕಿನಲ್ಲಿಯೇ ಮುನ್ನಡೆಯಬೇಕಾಗುತ್ತದೆ ಎಂದು ಹೇಳಿದರು.

32 ವರ್ಷಗಳ ನಂತರ ಅಕ್ಷರ ಕಲಿಸಿದ್ದ ಗುರುಗಳನ್ನು ಸ್ಮರಿಸಿಕೊಂಡು ಹಳೆಯ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಗುರುವಂದನೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಸೇವೆ ಅನನ್ಯವಾದುದು. ಗುರು ಶಿಷ್ಯ ಪರಂಪರೆ ಮುಂದುವರಿಯಲಿ ಎಂದರು.

ಜಗಣ್ಣಯ್ಯ ಮಠದ ಅಧ್ಯಕ್ಷ ಚನ್ನಬಸವ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರಪ್ಪ, ಮಲ್ಲಪ್ಪ ಶೆಟ್ಟರು ಮಾತನಾಡಿದರು. 24 ನಿವೃತ್ತ ಶಿಕ್ಷಕರು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT