ಮಾಗಡಿ: ಪಟ್ಟಣದ ತಿರುಮಲೆ ನಿವಾಸಿ ವಕೀಲೆ ವಾಸುಕಿ (24) ಆ.22 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿತ್ತು. ಈ ಆತ್ಮಹತ್ಯೆಗೆ ಬೆಂಗಳೂರಿನ ಆರ್.ಟಿ ನಗರದ ಮಾಜಿ ಕಾರ್ಪೊರೇಟರ್ ಗೋವಿಂದರಾಜು ಅವರ ಪುತ್ರ ಶ್ರವಣ ಕಾರಣ. ಅವರನ್ನು ಕೂಡಲೇ ವಿಚಾರಣೆಗೆ ಕರೆಸಿ, ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಮೃತ ವಾಸುಕಿ ತಾಯಿ ವಕೀಲೆ ವೆಂಕಟ್ ಲಕ್ಷ್ಮಿ ಠಾಣೆ ಎದುರು ಧರಣಿ ನಡೆಸಿದರು.
ಪಟ್ಟಣದ ಪೊಲೀಸ್ ಠಾಣೆ ಎದುರು ಶನಿವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಗೋವಿಂದರಾಜು ಅವರ ಮಗ ಶ್ರವಣ ಹಾಗೂ ವಾಸುಕಿ ಕಳೆದ ಆರು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಆದರೆ, ರಾಜಕೀಯ ಪ್ರಭಾವ ಬಳಸಿ ನನ್ನ ಮಗಳನ್ನು ದೂರ ಮಾಡಲು ನೋಡಿದರು. ಮೊದಲು ಮದುವೆಯಾಗುತ್ತೇನೆ ಎಂದು ನಂಬಿಸಿ ಪ್ರೀತಿಸಿದ ಶ್ರವಣ, ನಂತರ ಅವರ ಮನೆಗೆ ಹೋಗಿದ್ದ ಸಮಯದಲ್ಲಿ ಮದುವೆಯಾಗಲು ಆಗುವುದಿಲ್ಲ ಎಂದು ತಿಳಿಸಿದ್ದ. ಅಲ್ಲದೆ, ನಮ್ಮ ಮನೆ ಹತ್ತಿರ ಕುಡಿದು ಬಂದು ಗಲಾಟೆ ಮಾಡಿದ್ದ. ಇದರಿಂದ ಮನನೊಂದು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಾವಿಗೆ ಶ್ರವಣನೇ ಕಾರಣನಾಗಿದ್ದು, ಅವನ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಆ. 26ರಂದು ದೂರು ನೀಡಲಾಗಿದೆ. ಆದರೆ, ಇಲ್ಲಿಯವರೆಗೂ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಕೂಡ ಮಾಡಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಬೇಕು, ಅಲ್ಲಿಯವರೆಗೂ ನಾನು ಧರಣಿ ಮುಂದುವರೆಸುತ್ತೇನೆ ಎಂದು ಠಾಣೆ ಎದುರು ವಕೀಲೆ ವೆಂಕಟಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಗಡಿ ಪೊಲೀಸರು, ಶ್ರವಣ್ ಎನ್ನುವ ಯುವಕನ ಮೇಲೆ ಎಫ್‌ಐಆರ್ ಮಾಡಲಾಗಿದ್ದು, ಎರಡು ಬಾರಿ ನೋಟಿಸ್ ನೀಡಲಾಗಿದೆ. ಆರೋಪಿ ತಲೆಮರಿಸಿಕೊಂಡಿದ್ದು, ಹುಡುಕಾಟ ಮುಂದುವರೆದಿದೆ. ಏಪ್ರಿಲ್‌ನಲ್ಲಿ ಯುವತಿ ಜೊತೆ ಮಾತನಾಡಿರುವುದನ್ನು ಬಿಟ್ಟರೆ ನಂತರ ಯಾವುದೇ ರೀತಿ ಕರೆ ಮಾಡಿದ್ದು ತಿಳಿದು ಬಂದಿಲ್ಲ. ಆತ್ಮಹತ್ಯೆ ಮುನ್ನ ಯಾವುದೇ ರೀತಿ ಕರೆಗಳು ಅವನಿಂದ ಹೋಗಿಲ್ಲ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಆದಾಗ್ಯೂ, ಶ್ರವಣನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡುವ ಪ್ರಯತ್ನ ನಡೆದಿದೆ. ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜಾಮೀನು ಸಿಗುವವರೆಗೂ ಪೊಲೀಸರಿಂದ ತಲೆಮರಿಸಿಕೊಂಡಿದ್ದಾನೆ ಎಂದು ತಿಳಿಸಿದರು.
ಬೇರೆ ಯುವಕನೊಂದಿಗೆ ಮೃತ ವಕೀಲೆಯ ಮದುವೆ ನಿಶ್ಚಯವಾಗಿತ್ತು. ಶ್ರವಣನಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ತಾಯಿ ಆರೋಪಿಸುತ್ತಿದ್ದಾರೆ. ಪೊಲೀಸರ ಮನವರಿಕೆಯ ನಂತರ ತಾಯಿ ಧರಣಿ ನಿಲ್ಲಿಸಿದ್ದಾರೆ.
ಎಫ್ ಐ ಆರ್ ನಲ್ಲಿ ಏನು ಇದೇ :
ಆ.26 ರಂದು ಸಂಜೆ 5-30 ಗಂಟೆಗೆ ದೂರುದರಾದ ವೆಂಕಟ್ ಲಕ್ಷ್ಮೀ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಆ.22 ರಂದು ನನ್ನ ಮಗಳು ವಾಸುಕಿ ಬಿನ್ ರಾಜೇಂದ್ರ ಹೆಚ್ ರಾವ್ ರವರು ಆ.22 ರಂದು ಗುರುವಾರ ಸಂಜೆ 6-45 ರಿಂದ 7-45 ಗಂಟೆ ಸಮಯದಲ್ಲಿ ಅವಳ ಕೋಣೆಯಲ್ಲಿ ಬಿಗಿದುಕೊಂಡು ಮೃತಳಾಗಿದ್ದು, ಅವಳ ಸಾವಿಗೆ ಶ್ರವಣ ಬಿನ್ ಗೊವಿಂದರಾಜು ಸುಮಾರು 35 ವರ್ಷ ಆರ್ ಟಿ ನಗರ ನಿವಾಸಿಯೇ ಕಾರಣನಾಗಿರುತ್ತಾನೆ. ಏಕೆಂದರೆ, ಆತ ವಾಸುಕಿಯನ್ನು ಪ್ರೀತಿಸಿ ಸುಮಾರು 6 ವರ್ಷಗಳಾಗಿದ್ದರು ಮದುವೆಯಾಗದೆ ನಿರಾಕರಿಸಿದ್ದು, ನಂತರ ವಾಸುಕಿ ಮೊದಲು ಪ್ರೀತಿಸುತಿದ್ದ ಶ್ರವಂತ್ ಬಿನ್ ಉಮೇಶ ರವರನ್ನು ಆಕೆಯೇ ಮೆಚ್ಚಿ ಒಪ್ಪಿಸಿ ಮೇ ತಿಂಗಳಿನಲ್ಲಿ ತನ್ನ ಸ್ವಂತ ಆಸೆಯಂತೆ ಲಗ್ನಪತ್ರಿಕೆಯನ್ನು ಸಹ ಬರೆಸಿರುತ್ತಾಳೆ. ಇದರಿಂದ ಕುಪಿತನಾಗಿ ಶ್ರವಣ್ ನಮ್ಮ ತಿರುಮಲೆ ಗ್ರಾಮದ ಮನೆಯ ಬಳಿ ಬಂದು ನೀನು ಹೇಗೆ ಮದುವೆಯಾಗುತ್ತಿಯೋ ನೋಡುತ್ತೇನೆಂದು ಬೆದರಿಸಿದ ನಂತರ ಅಶ್ಲೀಲವಾಗಿ ಬೈದುಕೊಂಡು ಹೋಗಿರುತ್ತಾನೆ. ವಾಸುಕಿ ಮತ್ತು ಶ್ರವಂತ್ ರವರ ಮದುವೆಯನ್ನು ಅ. 26. ರಂದು ಮತ್ತು 27 ರಂದು ಶ್ರೀ ಹರಿ ಛತ್ರದಲ್ಲಿ ನಡೆಯುವಂತೆ ನಿಶ್ಚಯಿಸಿದ್ದೆವು. ಅದನ್ನು ತಡೆಗಟ್ಟಲು ಆಗದೇ ನನ್ನ ಮಗಳ ಮೊಬೈಲ್ ಸಂಖ್ಯೆ 8904997549 ಅಶ್ಲೀಲ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಹಾಗೂ ಸಾವಿಗೆ ಶರಣಾಗುವಂತೆ ಮಾನಕ್ಕೆ ಚಿತ್ರಹಿಂಸೆ ಆಗುವಂತೆ ಮೆಸೆಜ್ ಗಳನ್ನು ರವಾನಿಸಿದ್ದಾನೆಂದು ಶವಸಂಸ್ಕಾರ ಆಗುತ್ತಿದ್ದ ಸ್ಥಳದಲ್ಲಿ ವಾಸುಕಿಯ ಕೆಲವು ಸ್ನೇಹಿತರು ಮಾತನಾಡುತಿದ್ದನ್ನು ಕೆಳಿಸಿಕೊಂಡಿದ್ದು ಅದೇ ಪ್ರಕಾರ ಶವವನ್ನು ಮನೆಯ ಮುಂದೆ ಇಟ್ಟಿದ್ದಾಗ ನನ್ನ ಮಗಳ ಸಂಖ್ಯೆಗೆ ಶ್ರವಣ ಕರೆ ಮಾಡಿ ನನ್ನನ್ನು ಬೈದಿರುತ್ತಾನೆ. ಶ್ರವಣ್ ಮೊಬೈಲ್ ನಂ 9008240790 ಆಗಿದ್ದು, ಈತ ಬೇರೆ ಬೇರೆ ಮೊಬೈಲ್ ಉಪಯೋಗಿಸಿ ಬೇರೆಯವರ ಹೆಸರುಗಳಲ್ಲಿ. ಸಿಮ್ ಗಳನ್ನು ಪಡೆದು ಅವುಗಳ ಮೂಲಕ ಅಶ್ಲೀಲ ಚಿತ್ರಗಳು, ವಿಡಿಯೋ, ಹಿನಾಮಾನ ಮೆಸೆಜ್ ಗಳನ್ನು ಕಳುಹಿಸುತ್ತಿದ್ದು ಸಹ ತಿಳಿದು ಬಂದಿದೆ ಈತನ ಚಿತ್ರಹಿಂದೆ ತಾಳಲಾರದೇ ನನ್ನ ಮಗಳು ನೇಣಿಗೆ ಶರಣಾಗಿದ್ದು, ಅಲ್ಲದೇ ನನ್ನ ಮಗಳು ಶ್ರವಣ್ ಪ್ರೀತಿಸುತಿದ್ದ ಸಮಯದಲ್ಲಿ ನನ್ನನ್ನು ಹೀನಾಮಾನವಾಗಿ ಬೈಯುವುದು 10-15 ಲಕ್ಷಗಳನ್ನು ಕೇಳುತಿದ್ದ ಅದನ್ನು ನೀರಾಕರಿಸಿದರೆ ಹೀನಾಯ ಮಾತುಗಳಿಂದ ಬೈಯುತ್ತಿದ್ದ ಇವಳು ನನಗೆ ವಾಸುಕಿಯು ಒಬ್ಬಳೆ ಇದೇ ಕಾರಣದಿಂದ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ನಾನು ನನ್ನ ಮಗಳು ಸತ್ತ ತಕ್ಷಣ ಆಸ್ಪತ್ರೆಗೆ ದಾವಿಸಿ ನಂತರ ದೂರು ನೀಡಿದ್ದು ಯುಡಿಆರ್ ಪ್ರಕರಣ ದಾಖಲಾಗಿದ್ದು, ನಂತರ ಶವ ಸಂಸ್ಕಾರ ಮಾಡಿ ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೆನೆಂದು ನೀಡಿದ ದೂರಿನ ಮೇರೆಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಶ್ರವಣ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.