ಮಂಗಳವಾರ, ಜನವರಿ 21, 2020
29 °C

ಬೋನಿಗೆ ಬಿದ್ದ ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲ್ಲೂಕಿನ ಶ್ಯಾನುಭೋಗನಹಳ್ಳಿ ರೈತರನ್ನು ಕಾಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ವತಿಯಿಂದ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಒಂದು ತಿಂಗಳಿಂದಲೂ ಶ್ಯಾನುಭೋಗನಹಳ್ಳಿ, ಕಲ್ಲೂರು, ವರದೇನಹಳ್ಳಿ ಸುತ್ತಲಿನ ಗ್ರಾಮಗಳ ರೈತರಿಗೆ ಕಂಟಕಪ್ರಾಯವಾಗಿದ್ದ ಚಿರತೆ, ಹಳ್ಳಿಗಳ ರೈತರು ಸಾಕಿದ್ದ ಮೇಕೆ, ಕುರಿ, ನಾಯಿಗಳನ್ನು ತಿಂದು ಹಾಕಿತ್ತು.

ಗ್ರಾಮದ ರೈತರಾದ ರಾಮಚಂದ್ರಯ್ಯ, ಯೋಗೇಶ್‌ ಕುಮಾರ್‌, ಮುದ್ದಹನುಮೇಗೌಡರ ಮನವಿಯ ಮೇರೆಗೆ ಅರಣ್ಯ ಇಲಾಖೆಯವರು ಬೋನು ಇಟ್ಟಿದ್ದರು. ಗುರುವಾರ ಮಧ್ಯಾಹ್ನ 12.30ರಲ್ಲಿ ಚಿರತೆ ಬೋನಿಗೆ ಬಿದ್ದಿದೆ ಎಂದು ವಲಯ ಅರಣ್ಯ ಅಧಿಕಾರಿ ಪುಷ್ಪಾವತಿ.ಆರ್‌.ಕೆ.ತಿಳಿಸಿದರು. ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಟ್ಟುಬರುವಾಗಿ ತಿಳಿಸಿದರು. ಉಪವಲಯ ಅರಣ್ಯ ಅಧಿಕಾರಿ ಚಿದಾನಂದ್‌, ಗಾರ್ಡ್‌ಗಳಾದ ಯತೀಶ್‌, ಸಿದ್ದರಾಜು ಇದ್ದರು. ಸೆರೆಸಿಕ್ಕ ಚಿರತೆ ನೋಡಲು ಸುತ್ತಲಿನ ಗ್ರಾಮಗಳ ರೈತರು ಬಂದಿದ್ದರು.

ಪ್ರತಿಕ್ರಿಯಿಸಿ (+)