ಕುರಿ ಸಂತೆಯಲ್ಲಿ ವ್ಯಾಪಾರ ಮಾಡಲು ಬಂದಿರುವ ರೈತರು ಹಾಗೂ ವ್ಯಾಪಾರಸ್ಥರು
ಮಾಗಡಿ ಕೋಟೆ ಮೈದಾನದ ನೋಟ
ಪ್ರತಿ ಶುಕ್ರವಾರ ಬೇರೆ ಬೇರೆ ಜಿಲ್ಲೆಗಳಿಂದಲೂ ಕುರಿ–ಕೋಳಿ ಮೇಕೆ ಕೊಂಡುಕೊಳ್ಳಲು ಸಾಕಷ್ಟು ರೈತರು ದಲ್ಲಾಳಿಗಳು ಇಲ್ಲಿಗೆ ಬರುತ್ತಾರೆ. ಈಗ ಕೋಟೆ ಕಾಮಗಾರಿ ಆರಂಭವಾದ ನಂತರ ಸಂತೆ ಮಾಡಲು ಅವಕಾಶವಿಲ್ಲ. ಪುರಸಭೆಯಿಂದ 2 ಎಕರೆ ಜಾಗ ಗುರುತಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಜಾಗ ಸಿಕ್ಕ ಕೂಡಲೇ ಕುರಿ–ಕೋಳಿ ಸಂತೆ ನಿಗದಿ ಮಾಡಲಾಗುವುದು.
–ಎಚ್.ಸಿ.ಬಾಲಕೃಷ್ಣ, ಶಾಸಕ
ಕೋಟೆ ಕಾಮಗಾರಿ ಆರಂಭವಾದ ನಂತರ ಆ ಜಾಗದಲ್ಲಿ ಕುರಿ–ಕೋಳಿ ಸಂತೆ ಮಾಡಲು ಅವಕಾಶ ಇರುವುದಿಲ್ಲ. ಹೊಸದಾಗಿ ಜಾಗ ಗುರುತಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುರಿ–ಕೋಳಿ ಸಂತೆ ಮಾಡಲು ಅವಕಾಶ ಕೊಡಲಾಗುವುದು.
–ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ
ಸೋಮೇಶ್ವರ ಬಡಾವಣೆ ಸಮೀಪ ನಿವೇಶನ ಸೋಮೇಶ್ವರ ಬಡಾವಣೆ ಸಮೀಪ ಸರ್ಕಾರಿ ಜಾಗ ಗುರುತಿಸಲಾಗುತ್ತಿದೆ. ಒಂದು ವೇಳೆ ಜಾಗ ಸಿಗದಿದ್ದರೆ ಐಡಿಎಸ್‌ಎಂಟಿ ನಿವೇಶನ ಮಾರಾಟ ಮಾಡುತ್ತಿದ್ದು ಅದರಲ್ಲಿ ಬರುವ ಹಣದಿಂದ ಎರಡು ಎಕರೆ ಜಾಗ ಖರೀದಿಸಿ ಸಂತೆ ಮಾಡಲು ಜಾಗ ನಿಗದಿ ಮಾಡುವುದು.
–ಶಿವರುದ್ರಮ್ಮ, ಪುರಸಭೆ ಅಧ್ಯಕ್ಷೆ ಮಾಗಡಿ
ರೈತರು ಮಾರಾಟಗಾರರಿಗೆ ಅನುಕೂಲ ಕಲ್ಪಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋಟೆ ಮೈದಾನದಲ್ಲಿ ಕುರಿ–ಕೋಳಿ ಸಂತೆ ಮಾಡಲಾಗುತ್ತಿತ್ತು. ಈಗ ಮೈದಾನದಲ್ಲಿ ಅವಕಾಶ ಸಿಗದಿದ್ದರೆ ಪುರಸಭೆಯವರೇ ಜಾಗ ನಿಗದಿ ಮಾಡಿ ರೈತರು ಮಾರಾಟಗಾರರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು.