ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ: ಕಾಮಗಾರಿಗಳ ಪ್ರಗತಿ ಪರಿಶೀಲನೆ

Published : 20 ಸೆಪ್ಟೆಂಬರ್ 2024, 8:59 IST
Last Updated : 20 ಸೆಪ್ಟೆಂಬರ್ 2024, 8:59 IST
ಫಾಲೋ ಮಾಡಿ
Comments

ಮಾಗಡಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ತಾಲ್ಲೂಕಿನ ಮಾಡಬಾಳ್ ಮತ್ತು ಕಲ್ಯಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು.

ತಾಲ್ಲೂಕಿನ ಮಾಡಬಾಳ್ ಗ್ರಾ.ಪಂ.ವ್ಯಾಪ್ತಿಯ ಸೊಣ್ಣೇನಹಳ್ಳಿ ಮತ್ತು ಬಾಳೆಕಟ್ಟೆ ಗ್ರಾಮದ ಕಮ್ಯುನಿಟಿ ಸೋಕ್ ಪಿಟ್ ತೂಬಿನಕೆರೆ ಗ್ರಾಮದ ಚರಂಡಿ ಸಂಸ್ಕರಣಾ ಕಾಮಗಾರಿ, ಗೊಲ್ಲರಹಟ್ಟಿ ಮತ್ತು ವಿಠಲಾಪುರ ಗ್ರಾಮದ ಕಮ್ಯುನಿಟಿ ಸೋಕ್ ಪಿಟ್, ದ್ರವತ್ಯಾಜ್ಯ ಘಟಕ ಕಾಮಗಾರಿ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದಕ್ಕೂ ಮುನ್ನ ಮಾಡಬಾಳ್ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿದ ಸಿಇಓ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಸೃಜನೆ, ವೈಯಕ್ತಿಕ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈಗಾಗಲೇ ನರೇಗಾ ಯೋಜನೆಯಲ್ಲಿ ನಮ್ಮ ಜಿಲ್ಲೆ ಪ್ರಗತಿ ಸಾಧಿಸಿದ್ದು, ಮುಂದೆಯೂ ಇದು ಹೀಗೇ ಸಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್, ಸಹಾಯಕ ನಿರ್ದೇಶಕ ಎಚ್.ಕೆ. ಗಂಗಾಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕ ಮಹೇಶ್, ಸಹಾಯಕ ಅಭಿಯಂತರರಾದ ಪ್ರದೀಪ್, ಐಶ್ವರ್ಯ, ಎಸ್.ಬಿ.ಎಂ ಸಮಾಲೋಚಕ ಸೀನಪ್ಪ, ಐಇಸಿ ಸಂಯೋಜಕ ರವಿ ಅತ್ನಿ, ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT