ಭಾನುವಾರ, ಡಿಸೆಂಬರ್ 6, 2020
19 °C

ಮಾಗಡಿ: ಕೋವಿಡ್‌–19ನಿಂದ ವರ್ತಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದ ರಾಜ್‌ಕುಮಾರ್ ರಸ್ತೆಯ ಜವಳಿ ವರ್ತಕರೊಬ್ಬರು ಕೋವಿಡ್‌ –19ರಿಂದ ಮೃತಪಟ್ಟಿದ್ದಾರೆ. ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಕಲ್ಯಾಬಾಗಿಲಿನ ಅಕ್ಕಿ ಗಿರಣಿ ಲಾರಿ ಚಾಲಕ ಕೊರೊನಾದಿಂದ ಭಾನುವಾರವಷ್ಟೇ ಮೃತಪಟ್ಟ ಬೆನ್ನಲ್ಲೇ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಸೋಲೂರಿನ ಬಿಸ್ಲೆರಿ ಕಾರ್ಖಾನೆ ಕಾರ್ಮಿಕ ಮಹಿಳೆಯೊಬ್ಬರಿಗೆ ಕೋವಿಡ್‌ –19 ದೃಢಪಟ್ಟಿದೆ. ಅವರ ವಾಸದ ಗೊರೂರು ಗ್ರಾಮಕ್ಕೆ ತಹಶೀಲ್ದಾರ್‌ ಶ್ರೀನಿವಾಸ ಪ್ರಸಾದ್‌, ಇಒ ಟಿ.ಪ್ರದೀಪ್‌, ಕುದೂರು ಪಿಎಸ್‌ಐ ಮಂಜುನಾಥ, ಗ್ರಾ.ಪಂ ಅಧ್ಯಕ್ಷ ಚನ್ನಗಂಗಯ್ಯ, ಸದಸ್ಯ ಶ್ರೀನಿವಾಸ‌ ಭೇಟಿ ನೀಡಿ ಪರಿಶೀಲಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು