ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರ ಬಗ್ಗೆಯೇ ಈ ರೀತಿ ಮಾತನಾಡಿರುವ ಚಂದ್ರಶೇಖರ್ ಸಾಮಾನ್ಯ ಜನರ ಜೊತೆಗೆ ಹೇಗೆ ವರ್ತಿಸಬಹುದು ಎಂದು ಊಹಿಸಬಹುದು. ಚಂದ್ರಶೇಖರ್ ಪತ್ರದ ಹಿಂದೆ ಸರ್ಕಾರದ ಪಾತ್ರ ಇದೆಯಾ ಎಂದು ಸುದ್ದಿಗಾರರು ಕೇಳಿದ ಪ್ರರ್ಶನೆಗೆ ಉತ್ತರಿಸಿದ ಮಂಜುನಾಥ್, ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಈ ಅನುಮಾನವನ್ನು ಕುಮಾರಸ್ವಾಮಿ ಅವರೂ ವ್ಯಕ್ತಪಡಿಸಿದ್ದಾರೆ. ಇದನ್ನು ಬಹಿರಂಗ ಮಾಡಲು ತನಿಖೆ ನಡೆಯಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ ಹಾಗೂ ಮುಖಂಡರು ಹಾಜರಿದ್ದರು.