ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಏಳು ಕಿ.ಮೀ. ಕ್ರಮಿಸಿದ ಪಾದಯಾತ್ರಿಗರು

Last Updated 10 ಜನವರಿ 2022, 9:17 IST
ಅಕ್ಷರ ಗಾತ್ರ

ರಾಮನಗರ: ಮೇಕೆದಾಟು ಪಾದಯಾತ್ರೆಯ ಎರಡನೇ ದಿನವಾದ ಸೋಮವಾರ ಪಾದಯಾತ್ರಿಗರು‌ ಮಧ್ಯಾಹ್ನದ ಹೊತ್ತಿಗೆ ಏಳು ಕಿ.ಮೀ. ಕ್ರಮಿಸಿದ್ದು, ಮಾದಪ್ಪನದೊಡ್ಡಿ‌ ಬಳಿ ಊಟಕ್ಕೆ ಬಿಡುವು ತೆಗೆದುಕೊಂಡಿದ್ದಾರೆ.

ಎರಡನೇ ದಿನ ಪಾದಯಾತ್ರೆಯಲ್ಲಿ ಹಿರಿಯ ನಾಯಕರು ಕಾಣಿಸಿಕೊಳ್ಳಲಿಲ್ಲ.‌ ಸಿದ್ದರಾಮಯ್ಯ ಸಹ ಅನಾರೋಗ್ಯದ ಕಾರಣ ಹಿಂದೆ ಸರಿದರು. ಪಕ್ಷದ ಮುಖಂಡರಾದ ಈಶ್ವರ ಖಂಡ್ರೆ, ವಿನಯ ಕುಲಕರ್ಣಿ , ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್, ಮಾಜಿ ಸಚಿವೆ ಉಮಾಶ್ರೀ , ಶಾಸಕ ನರೇಂದ್ರ ಸ್ವಾಮಿ ಸೇರಿದಂತೆ ಕೆಲವು ಪ್ರಮುಖರಷ್ಟೇ ಹೆಜ್ಜೆ ಹಾಕುತ್ತಿದ್ದಾರೆ.

ಬೆಳಿಗ್ಗೆ 9.30ಕ್ಕೆ‌ ದೊಡ್ಡಾಲಹಳ್ಳಿಯಲ್ಲಿ ಪಾದಯಾತ್ರೆ ಆರಂಭಗೊಂಡಿದ್ದು, ಮಧ್ಯಾಹ್ನ 2.20ರ ವೇಳೆಗೆ ಮಾದಪ್ಪನದೊಡ್ಡಿಯಲ್ಲಿ ವಿರಮಿಸಿತು. ಸಂಜೆ ಇಲ್ಲಿಂದ ಕನಕಪುರ ಪಟ್ಟಣದತ್ತ ಪಾದಯಾತ್ರೆ ಮುಂದುವರಿಯಲಿದೆ.

ಈ ದಿನ ಕನಕಪುರ ತಾಲ್ಲೂಕಿನ ಜೊತೆಗೆ ಚಾಮರಾಜನಗರ ಜಿಲ್ಲೆಯಿಂದ ಜನರು ಬಂದಿದ್ದಾರೆ. ನೂರಕ್ಕೂ ಹೆಚ್ಚು ಬಸ್ ಗಳಲ್ಲಿ ಅವರನ್ನು ಕರೆತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT