ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಕೋತಿಗಳ ಹಾವಳಿ: ಪರಿಹಾರಕ್ಕೆ ಒತ್ತಾಯ

Published : 17 ಸೆಪ್ಟೆಂಬರ್ 2024, 15:14 IST
Last Updated : 17 ಸೆಪ್ಟೆಂಬರ್ 2024, 15:14 IST
ಫಾಲೋ ಮಾಡಿ
Comments

ಮಾಗಡಿ: ಇಲ್ಲಿನ ವೀರೇಗೌಡನ ದೊಡ್ಡಿಯಲ್ಲಿ ಕೋತಿಗಳ ಹಾವಳಿಯಿಂದ ಹೊರಗಡೆ ಹೋಗಲು ಭಯವಾಗುತ್ತಿದೆ. ಕೂಡಲೇ ಕೋತಿಗಳನ್ನು ಹಿಡಿದು ಬೇರೆ ಕಡೆ ಸಾಗಿಸಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಇತ್ತೀಚೆಗಷ್ಟೇ ಗ್ರಾಮದ ಹತ್ತು–ಹನ್ನೆರಡು ಮಹಿಳೆಯರ ಮೇಲೆ ಕೋತಿಗಳು ದಾಳಿ ಮಾಡಿ, ಗಾಯಗೊಳಿಸಿದ್ದ ಘಟನೆಗಳು ನಡೆದಿವೆ. ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯವರು ಕೂಡಲೇ ಇದಕ್ಕೊಂದು ಪರಹಾರ ಕಂಡುಹಿಡಿಯಬೇಕು ಎಂದು ಗ್ರಾಮದ ನಿವಾಸಿ ರಾಜೇಶ್ ಆಗ್ರಹಿಸಿದರು.ಗ್ರಾಮಸ್ಥರು ಈ ಬಗ್ಗೆ ತಾಲ್ಲೂಕು ವಲಯ ಅರಣ್ಯಾಧಿಕಾರಿ ಚೈತ್ರಾ ಹಾಗೂ ಹಂಚಿಕುಪ್ಪೆ ಗ್ರಾ.ಪಂ ಪಿಡಿಓ ಅಂಜನ್ ಅವರಿಗೆ ಮನವಿ ಸಲ್ಲಿಸಿದರು. 

ಹಾಲು ಉತ್ಪಾದಕರ ಸಂಘದ ನಿರ್ದೇಶಕ ಜೆ.ಬಸವರಾಜು ಮಾತನಾಡಿ, ಕೋತಿಗಳ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದು, ತೋಟ, ಗದ್ದೆಗಳಲ್ಲಿ ಒಬ್ಬೊಬ್ಬರೇ ತಿರುಗಾಡುವಂತಿಲ್ಲ. ಮನುಷ್ಯರ ಮೇಲೆ ದಾಳಿ ಮಾಡುವುದಲ್ಲದೇ ಜಮೀನುಗಳಲ್ಲಿನ ಬೆಳೆಗಳನ್ನೂ ನಾಶ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ವಲಯ ಅರಣ್ಯಾಧಿಕಾರಿ ಚೈತ್ರಾ ಮಾತನಾಡಿ, ಕೋತಿಗಳ ಹಾವಳಿಯನ್ನು ತಡೆಗಟ್ಟುವುದು ಸ್ಥಳೀಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುತ್ತದೆ.  ಘಟನೆಯ ಬಗ್ಗೆ ಜಿಲ್ಲಾ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಕೋತಿಗಳ ಸೆರೆಗೆ ಅನುಮತಿ ಪಡೆದು ಪಂಚಾಯಿತಿಯ ನೆರವಿನಿಂದ ಕೋತಿ ಪರಿಹಾರದ ಕೆಲಸ ಮಾಡಲಾಗುತ್ತದೆ ಎಂದು‌ ಭರವಸೆ ‌ನೀಡಿದರು.

ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಪಿಡಿಒ ಅಂಜನ್ ಮಾತನಾಡಿ, ಈ ವಿಚಾರವನ್ನು ಸಿಇಓ ಮತ್ತು ತಾಲ್ಲೂಕು ಇಓ ಅವರಿಗೆ ಪತ್ರ ಬರೆಯಲಾಗುವುದು. ಆಡಳಿತ ಮಂಡಳಿ ಸದಸ್ಯರ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು. ಅರಣ್ಯ ಇಲಾಖೆ ಅನುಮತಿ ನೀಡಿದ ಕೂಡಲೇ ಕೋತಿಗಳ ಸೆರೆಹಿಡಿದು ಅರಣ್ಯಕ್ಕೆ ಬಿಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಜಯಣ್ಣ, ಶಿವಕುಮಾರ್, ಪಂಚಾಕ್ಷರಿ, ಡಿ.ಎಫ್.ಆರ್ ಕೃಷ್ಣಮೂರ್ತಿ, ಗ್ರಾಮಸ್ಥರಾದ ವೇದಮೂರ್ತಿ, ಶಶಿಧರ್, ಬಸವರಾಜು, ಶಿಲ್ಪಾ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT