ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ | ಮಗುವನ್ನು ನದಿಗೆ ಎಸೆದು ಕೊಂದ ತಾಯಿ

Published 21 ಡಿಸೆಂಬರ್ 2023, 5:18 IST
Last Updated 21 ಡಿಸೆಂಬರ್ 2023, 5:18 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಕಾಲಿಕೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಮಗುವನ್ನು ನದಿಗೆ ಎಸೆದು ಕೊಲೆ ಮಾಡಿದ್ದಾಳೆ.

ಪತಿ ಅಂಬಾಡಹಳ್ಳಿ ಗ್ರಾಮದ ಶ್ರೀನಿವಾಸ ನೀಡಿದ ದೂರಿನ ಮೇರೆಗೆ ಅಕ್ಕೂರು ಠಾಣೆ ಪೊಲೀಸರು ಬುಧವಾರ ಮಗುವಿನ ತಾಯಿ ಭಾಗ್ಯ ಎಂಬಾಕೆಯನ್ನು ಬಂಧಿಸಿದ್ದಾರೆ. 

ತಾಲ್ಲೂಕಿನ ಬಾಣಗಹಳ್ಳಿ–ಕೊಂಡಾಪುರ ನಡುವೆ ಇರುವ ಕಣ್ವ ನದಿಗೆ ಭಾಗ್ಯ ತನ್ನ ಮಗು ದೇವರಾಜುನನ್ನು ಎಸೆದು ಕೊಲೆ ಮಾಡಿದ್ದಾಳೆ. ನದಿಯಲ್ಲಿ ಮಗುವಿನ ದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರ ತನಿಖೆ ವೇಳೆ  ಕೊಲೆ ವಿಷಯ ಬೆಳಕಿಗೆ ಬಂದಿದೆ.

ಕೆಲವು ದಿನಗಳಿಂದ ಗಂಡನಿಂದ ದೂರವಿರುವ ಭಾಗ್ಯ ಕಾಲಿಕೆರೆ ಗ್ರಾಮದ ತನ್ನ ತವರು ಮನೆಯಲ್ಲಿದ್ದಳು. ಪತಿ ನೀಡಿದ ದೂರಿನ ಮೇರೆಗೆ ಭಾಗ್ಯ ಸ್ನೇಹಿತ ಮಾದಾಪುರ ಗ್ರಾಮದ ರಾಜು ಬಿನ್ ಹೇದಗಿರಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸುಳೆಯನ್ನು ಕೊಂದ ತಾಯಿ ಭಾಗ್ಯ
ಹಸುಳೆಯನ್ನು ಕೊಂದ ತಾಯಿ ಭಾಗ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT