ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ಸಖಿಯರಿಗೆ ಒಂದು ದಿನದ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.

ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸಲಾಗುತ್ತಿದೆ. ಹಾಗಾಗಿ ನೈಸರ್ಗಿಕ ಕೃಷಿಯನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿಜ್ಞಾನಿ ಡಾ.ಬಿ.ಎಸ್.ಶ್ವೇತ ತಿಳಿಸಿದರು.

ಮಣ್ಣು ವಿಜ್ಞಾನದ ವಿಜ್ಞಾನಿ ಡಿ.ಸಿ.ಪ್ರೀತು ಮಾತನಾಡಿ, ತರಬೇತಿಯಲ್ಲಿ ಕೃಷಿ ಸಖಿಯರಿಗೆ ನೈಸರ್ಗಿಕ ಕೃಷಿ ಮಹತ್ವ, ತತ್ವಗಳು, ಮಣ್ಣಿನ ಮಹತ್ವ, ಮಣ್ಣಿನ ಪೋಷಕಾಂಶಗಳ ನಿರ್ವಹಣೆಗಾಗಿ ಜೀವಾಮೃತ ಬಳಕೆ, ಹೊದಿಕೆಯ ಮಹತ್ವ, ಜೈವಿಕಗೊಬ್ಬರಗಳ ಬಳಕೆ, ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ, ನೀರಿನ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿ, ಬೀಜ ಮತ್ತು ಸಸಿಗಳ ನಿರ್ವಹಣೆ ಮುಂತಾದವುಗಳ ಕುರಿತು ತಿಳಿಸಿದರು.

ವಿಜ್ಞಾನಿ ಡಾ.ಎಂ.ಪ್ರಮೋದ್ ಮಾತನಾಡಿ, ನೈಸರ್ಗಿಕ ಕೃಷಿಯಲ್ಲಿ ಬಳಕೆ ಮಾಡುವ ಜೀವಾಮೃತ, ಘನಜೀವಾಮೃತ , ಬೀಜಾಮೃತ, ನೀಮಾಸ್ತ್ರ, ಅಗ್ನಿಅಸ್ತ್ರ, ಸಸ್ಯಸಂರಕ್ಷಣೆಗಾಗಿ ವಿವಿಧ ರೀತಿಯ ಮೋಹಕ ಬಲೆಗಳ ಬಳಕೆ ಮತ್ತು ದಶಪರ್ಣಿ ಕಷಾಯಗಳ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆಗಳನ್ನು ನೀಡಲಾಯಿತು.

ಕೇಂದ್ರದ ವಿಜ್ಞಾನಿ ಡಾ.ಅನಿತಾ, ಸಹಾಯಕ ಕೃಷಿ ನಿರ್ದೇಶಕ ವನಿತಾ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.