ಸೋಮವಾರ, ಏಪ್ರಿಲ್ 6, 2020
19 °C

ಸ್ಯಾನಿಟೈಸರ್‌ನಿಂದ ಸ್ವಚ್ಚಗೊಳಿಸಿ ಸಾಮಾಜಿಕ ಕಾಳಜಿ ವಹಿಸಿದ ಪತ್ರಿಕೆ ವಿತರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಕೊರೊನಾ ವೈರಸ್‌ ಹರಡುವಿಕೆ ಹಿನ್ನೆಲೆಯಲ್ಲಿ ಪ್ರಜಾವಾಣಿ ಪತ್ರಿಕೆಯ ವಿತರಕರು ಭಾನುವಾರ ಬೆಳಿಗ್ಗೆ ಪತ್ರಿಕೆ ಹಂಚಿಕೆ ಮಾಡುವುದಕ್ಕಿಂತ ಮುಂಚಿತವಾಗಿ ಕೈಗಳಿಗೆ ಸ್ಯಾನಿಟೈಸರ್‌ ಸಿಂಪರಣೆ ಮಾಡಿಕೊಂಡು ಕಾರ್ಯ ನಿರ್ವಹಿಸಿದರು.

ಸೋಂಕು ವ್ಯಕ್ತಿಗಳಿಂದ ವ್ಯಕ್ತಿಗೆ ಹರುಡುತ್ತದೆ ಎಂಬ ಕಾರಣಕ್ಕೆ ಪತ್ರಿಕೆಯನ್ನು ಮುಟ್ಟಿ ಮನೆಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ರೋಗಾಣುಗಳು ಪತ್ರಿಕೆ ಮೂಲಕ ಹರಡದಂತೆ ಜಾಗೃತಿವಹಿಸುವ ಕೆಲಸವನ್ನು ಪ್ರಜಾವಾಣಿ ಸಂಸ್ಥೆಯು ಮಾಡಿದೆ.

ಪತ್ರಿಕೆಯ ವಿತರಣೆ ಸಂದರ್ಭದಲ್ಲಿ ಹಂಚಿಕೆ ಕಾರ್ಯ ಮಾಡುವ ಎಲ್ಲರೂ ಕೈಗಳಿಗೆ ಗ್ಲೌಸ್‌ ಹಾಕಿಕೊಳ್ಳುವುದು, ಇಲ್ಲವೆ ಸ್ಯಾನಿಟೈಸರನ್ನು ಸಿಂಪರಣೆ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಕಳಕಳಿವಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು