ರಾಮನಗರ: ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಸ್ಥಳೀಯರ ಓಡಾಟಕ್ಕೆ ಅನುಕೂಲವಾಗುವಂತೆ ಅಗತ್ಯ ಇರುವೆಡೆ ಅಂಡರ್ಪಾಸ್ ಮತ್ತು ಸ್ಕೈವಾಕ್ ನಿರ್ಮಾಣಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಹೆದ್ದಾರಿಯಲ್ಲಿ ವಾಹನಗಳ ಸವಾರರು ಹಾಗೂ ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆಗಳ ಜೊತೆಗೆ ಕೆಲವೆಡೆ ಇನ್ನೂ ಅಪೂರ್ಣವಾಗಿರುವ ಹೆದ್ದಾರಿ ಕಾಮಗಾರಿಯನ್ನು ಮಂಗಳವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸ್ಥಳೀಯ ಬಿಜೆಪಿ–ಜೆಡಿಎಸ್ ಮುಖಂಡರೊಂದಿಗೆ ಅವರು ಪರಿಶೀಲನೆ ನಡೆಸಿದರು.

ಹೆದ್ದಾರಿ ಆರಂಭವಾಗುವ ಕೆಂಗೇರಿ ಬಳಿಯ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದಿಂದ ಸಂಸದರು ಹೆದ್ದಾರಿ ಪರಿಶೀಲನೆ ಶುರು ಮಾಡಿದರು. ಬೆಂಗಳೂರು ಕಡೆಯಿಂದ ಆರಂಭವಾಗುವ ಹಾಗೂ ಮೈಸೂರು ಕಡೆಯಿಂದ ಅಂತ್ಯಗೊಳ್ಳುವ ಹೆದ್ದಾರಿ ಸ್ಥಳದಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಲ್ಲಿಂದ ನಿರ್ಮಾಣ ಹಂತದಲ್ಲಿರುವ ಶೇಷಗಿರಿಹಳ್ಳಿ ಬಳಿ ಅಂಡರ್ಪಾಸ್, ಮಂಚನಾಯಕನಹಳ್ಳಿಯ ಲಕ್ಷ್ಮೀಸಾಗರ ಗೇಟ್ ಬಳಿ ಪಾದಚಾರಿಗಳಿಗಾಗಿ ಸ್ಕೈವಾಕ್ ನಿರ್ಮಾಣ, ಬಿಡದಿಯಲ್ಲಿ ಪ್ರಯಾಣಿಕರ ತಂಗುದಾಣ ಹಾಗೂ ಮಾದಾಪುರ ಗೇಟ್ ಬಳಿ ಸ್ಕೈವಾಕ್ ನಿರ್ಮಾಣದ ಸ್ಥಳಕ್ಕೆ ಡಾ. ಮಂಜುನಾಥ್ ಭೇಟಿ ನೀಡಿದರು.

ಸ್ಥಳೀಯರಿಂದ ಮನವಿ: ಶೇಷಗಿರಿಹಳ್ಳಿಯಲ್ಲಿ ಸ್ಥಳೀಯರು ಹೆದ್ದಾರಿ ದಾಟುವುದಕ್ಕಾಗಿ ಪ್ರಾಧಿಕಾರವು ಅಂಡರ್ಪಾಸ್ ಕಾಮಗಾರಿ ಆರಂಭಿಸಿತ್ತು. ಆದರೆ, ಪೂರ್ಣಗೊಳಿಸದಿರುವುದರಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಕುರಿತು ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ, ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಸಂಸದರ ಬಳಿ ಅಳಲು ತೋಡಿಕೊಂಡರು.

ಅಂಡರ್ಪಾಸ್ ಪೂರ್ಣಗೊಳ್ಳದ ಕಾರಣ ಸ್ಥಳೀಯರು ಅನಿವಾರ್ಯವಾಗಿ ಹೆದ್ದಾರಿ ತಂತಿ ಬೇಲಿ ಮುರಿದು ಅಪಾಯ ಲೆಕ್ಕಿಸದೆ ಹೆದ್ದಾರಿ ದಾಟಬೇಕಿದೆ. ಇದರಿಂದಾಗಿ ಹಲವು ಸಲ ಅಪಘಾತ ಸಂಭವಿಸಿದ್ದು, ಕೆಲವರು ಜೀವ ಕಳೆದುಕೊಂಡಿದ್ದಾರೆ. ಹಾಗಾಗಿ, ಅಂಡರ್ಪಾಸ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು.

ಅದಕ್ಕೆ ಸ್ಪಂದಿಸಿದ ಡಾ. ಮಂಜುನಾಥ್ ಅವರು, ಆದ್ಯತೆ ಮೇರೆಗೆ ಅಂಡರ್ಪಾಸ್ ಕೆಲಸ ಪೂರ್ಣಗೊಳಿಸಿ. ಬೆಂಗಳೂರು ಕಡೆಗೆ ಸಂಚರಿಸುವ ಸರ್ವಿಸ್ ರಸ್ತೆ ಕಿರಿದಾಗಿದ್ದು, ಈ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಮೇಲ್ಸೇತುವೆ ನಿರ್ಮಿಸಬೇಕು. ಕೆಳಭಾಗದಲ್ಲಿ ಮೈಸೂರು ಕಡೆಗೆ ಹೋಗಲು ಖಾಸಗಿ ಜಮೀನು ಭೂ ಸ್ವಾಧೀನ ಮಾಡಿಕೊಂಡು ಅಂಡರ್ಪಾಸ್ ವಿಸ್ತರಿಸಿ ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಲವೆಡೆ ಸರ್ವೀಸ್ ರಸ್ತೆ ಅಪೂರ್ಣವಾಗಿದ್ದು, ಅದನ್ನು ಪೂರ್ಣಗೊಳಿಸಬೇಕು. ರಸ್ತೆಯ ಪಕ್ಕದಲ್ಲಿ ಕೆಲವೆಡೆ ಸರಿಯಾಗಿ ಚರಂಡಿ ನಿರ್ಮಿಸದಿರುವುದರಿಂದ ಮಳೆಗಾಲದಲ್ಲಿ ನೀರು ನಿಂತು ಸವಾರರು ತೊಂದರೆ ಅನುಭವಿಸುತ್ತಾರೆ. ಹಾಗಾಗಿ, ಸರ್ವೀಸ್ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮಿಲನ್ ಕುಮಾರ್, ಜೆಡಿಎಸ್ನ ಮಾಜಿ ಶಾಸಕ ಎ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ನರಸಿಂಹಯ್ಯ, ಎಂ.ಎನ್.ಮಂಜುನಾಥ್, ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರ ಬಸವರಾಜು, ಮುಖಂಡರಾದ ಸತೀಶ್ ಕುಮಾರ್, ವಿ. ವೆಂಕಟೇಶ್, ಎ. ನಾಗೇಶ್, ಗೋವಿಂದರಾಜು, ಶಿವಣ್ಣ,ಸೋಮೇಗೌಡ, ಶೇಷಪ್ಪ, ಶೇಷಗಿರಿಹಳ್ಳಿ ನರಸಿಂಹಮೂರ್ತಿ, ಮಂಜುನಾಥ್ ಹಾಗೂ ಇತರರು ಇದ್ದರು.

ತಂಗುದಾಣಕ್ಕೆ ಮನವಿ

ಬಿಡದಿ ಪಟ್ಟಣಕ್ಕೆ ಭೇಟಿ ನೀಡಿದ ಸಂಸದರು ಅಲ್ಲಿನ ಬಿಜಿಎಸ್ ವೃತ್ತ ಮತ್ತು ಬಸ್ ತಂಗುದಾಣಗಳನ್ನು ಪರಿಶೀಲಿಸಿದರು. ಬಿ.ಎಂ. ರಸ್ತೆಯಲ್ಲಿ ಎರಡೂ ಕಡೆ ಬಸ್ಗಳ ನಿಲುಗಡೆಗೆ ಜಾಗ ಕಿರಿದಾಗಿದ್ದು ಅದನ್ನು ವಿಸ್ತರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ಅದಕ್ಕೆ ಸಂಸದರು ಸ್ಥಳ ಪರಿಶೀಲನೆ ನಡೆಸಿ ತಂಗುದಾಣ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಿರಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಉಪಾಧ್ಯಕ್ಷೆ ಆಯಿಷಾ ಖಲೀಲ್ ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ದೇವರಾಜು ಮುಖಂಡರಾದ ಪ್ರಸಾದ್ ಗೌಡ ಇಟ್ಟಮಡು ಗೋಪಾಲ್ ಡಾ. ಭರತ್ ಕೆಂಪಣ್ಣ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.