ಕುಮಾರಸ್ವಾಮಿ– ಇಂದ್ರಜಿತ್ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಡಿ: ನಿಖಿಲ್

ರಾಮನಗರ: ಕಳೆದ ಎರಡು ವಾರದ ಹಿಂದೆ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಮ್ಮ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದು ನಿಜ. ಆದರೆ ಇವತ್ತಿನ ಚರ್ಚೆಗೆ ಆ ವಿಷಯವನ್ನು ಥಳಕು ಹಾಕಬೇಡಿ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇಂದ್ರಜಿತ್ ಲಂಕೇಶ್- ಕುಮಾರಸ್ವಾಮಿ ಜೊತೆಗಿರುವ ಫೋಟೊಗಳು ವೈರಲ್ ಆಗಿರುವ ಕುರಿತು ಅವರು ಅವರು ರಾಮನಗರದಲ್ಲಿ ಶನಿವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು.
ಕೆಲವರು ಬೇರೆ ಬೇರೆ ಉದ್ದೇಶಕ್ಕೆ ಫೋಟೊಗಳನ್ನು ಬಿಟ್ಟುಕೊಂಡಿರುತ್ತಾರೆ. ಎಲ್ಲದಕ್ಕೂ ಕುಮಾರಸ್ವಾಮಿ ಅವರನ್ನು ಕ್ಲಬ್ ಮಾಡುವುದು ಸರಿಯಲ್ಲ. ಈ ವಿಚಾರವಾಗಿ ಇಂದ್ರಜಿತ್ ಅವರನ್ನೇ ಪ್ರಶ್ನಿಸುವುದು ಒಳಿತು ಎಂದರು.
ಇದನ್ನೂ ಓದಿ... ಇಂದ್ರಜಿತ್-ಕುಮಾರಸ್ವಾಮಿ ಭೇಟಿ ಫೋಟೊ ವೈರಲ್: ಈ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.