
ಕರೋನಾ ನಂತರ ಚಿತ್ರಮಂದಿರದ ಕಡೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಯಿತು. ಒಟಿಟಿ ಬಂದ ಮೇಲೆ ಮನೆಯಲ್ಲೇ ಹೊಸ ಚಿತ್ರಗಳನ್ನು ನೋಡಲು ಆರಂಭಿಸಿದರು. ಪ್ರೇಕ್ಷಕರ ಕೊರತೆಯಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಬಹಳ ನೋವಿನಿಂದ ನಿರ್ಮಲಾ ಚಿತ್ರಮಂದಿರ ಮುಚ್ಚಲಾಗುತ್ತಿದೆ.
-ಆರ್.ಎನ್.ರಂಗಪ್ರಕಾಶ್, ನಿರ್ಮಲಾ ಚಿತ್ರಮಂದಿರದ ಮಾಲೀಕ 
ಅಂದಿನ ಬೆಂಗಳೂರು ಜಿಲ್ಲೆಗೆ ಮೊದಲ ಟಾಕೀಜ್ ಮನರಂಜನೆಗೆ ಹೆಸರು ವಾಸಿಯಾಗಿದ್ದ ನಿರ್ಮಲಾ ಚಿತ್ರಮಂದಿರ ಈಗ ಇತಿಹಾಸ ಪುಟ ಸೇರುತ್ತಿರುವುದು ನೋವಿನ ಸಂಗತಿ. ಚಿತ್ರ ಪ್ರದರ್ಶನದ ಜೊತೆಗೆ ಸರ್ಕಾರಿ ಕಾರ್ಯಕ್ರಮಗಳಿಗೆ ಆರೋಗ್ಯ ಶಿಬಿರಗಳಿಗೆ ಚಿತ್ರಮಂದಿರವನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗ ಪ್ರೇಕ್ಷಕರ ಕೊರತೆಯಿಂದ ಕಡೆ ಆಟ ಮುಗಿಸುತ್ತಿರುವುದು ಬೇಸರ ತಂದಿದೆ.
-ಕೆ.ವಿ.ಬಾಲು, ಪುರಸಭೆ ಸದಸ್ಯರು ಮಾಗಡಿ.1976ರಲ್ಲಿ ನಿರ್ಮಲ ಚಿತ್ರಮಂದಿರ ಉದ್ಘಾಟನೆ ಮಾಡಿದ್ದ ಮಾಜಿ ಸಚಿವ ದಿ.ಚನ್ನಪ್ಪನವರು ಹಾಗೂ ಗಣ್ಯರು
ಚಿತ್ರಮಂದಿರ ಆರಂಭವಾದ ಸಮಯದಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರು
ನಿರ್ಮಲಾ ಚಿತ್ರಮಂದಿರದ ಮಾಲೀಕರಿಗೆ ಪ್ರಶಸ್ತಿ ಬಂದಿರುವುದು