ಬುಧವಾರ, ಜನವರಿ 29, 2020
30 °C

ತೆರಿಗೆ ಕಟ್ಟದಿದ್ದರೆ, ಪರವಾನಗಿ ರದ್ದು: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಪಟ್ಟಣದಲ್ಲಿನ ದಿನಸಿ ಅಂಗಡಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮತ್ತು ವೈನ್‌ ಸ್ಟೋರ್‌ಗಳ ಮಾಲೀಕರು ಕಡ್ಡಾಯವಾಗಿ ಪರವಾನಗಿ ಪಡೆದು ಕಾಲಕಾಲಕ್ಕೆ ನವೀಕರಿಸಿ, ತೆರಿಗೆ ಕಟ್ಟಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ್‌ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದಲ್ಲಿ 9 ಸಾವಿರ ಖಾತೆದಾರರಿದ್ದಾರೆ. 3 ಸಾವಿರ ಖಾತೆದಾರರು ಮಾತ್ರ ಅಧಿಕೃತವಾಗಿ ತೆರಿಗೆ ಕಟ್ಟುತ್ತಿದ್ದಾರೆ. 6 ಸಾವಿರ ಅನಧಿಕೃತ ಖಾತೆದಾರರು ಕೂಡಲೇ ಅಧಿಕೃತ ದಾಖಲೆಗಳನ್ನು ನೀಡಿ ತೆರಿಗೆ ಪಾವತಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಶಾಸಕರು ಮತ್ತು ಸಂಸದರ ಗಮನಕ್ಕೆ ಸಿಬ್ಬಂದಿ ಕೊರತೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ತರಕಾರಿ, ಇತರ ಸಾಮಾನು ಖರೀದಿಸುವವರು ಕಡ್ಡಾಯವಾಗಿ ಬಟ್ಟೆಯ ಕೈಚೀಲ ಬಳಸಬೇಕು. ತರಕಾರಿ, ಹೂವು, ಬೇಕರಿಗಳಲ್ಲಿ ಪ್ಲಾಸ್ಟಿಕ್‌ ಕವರ್‌ ಬಳಸಿದರೆ ಮಂಗಳವಾರದಿಂದಲೇ ದಂಡ ವಿಧಿಸಲಾಗುವುದು’ ಎಂದರು.

‘ಬೀದಿ ಬದಿ ವ್ಯಾಪಾರಿಗಳ ಸಮಿತಿ ರಚಿಸಲು 10 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಡಿ.21ರಂದು ಚುನಾವಣೆ ನಡೆಯಲಿದೆ. 300 ಜನ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಹೊಸ ಬಡಾವಣೆ ನಿರ್ಮಿಸುವವರು ಪುರಸಭೆಯಿಂದ ಪರವಾನಗಿ ಪಡೆದಿಲ್ಲ. ಆಸ್ತಿ ತೆರಿಗೆ ಕಟ್ಟದಿದ್ದರೆ ಅಂಗಡಿ, ಉದ್ಯಮ ಘಟಕಗಳನ್ನು ಬಂದ್‌ ಮಾಡಲಾಗುವುದು. ಮನೆಯ ಕಸವನ್ನು ಮನೆಯಲ್ಲಿ ಹಸಿ ಮತ್ತು ಒಣ ಕಸ ಎಂದು ವಿಂಗಡಿಸಿಕೊಂಡು ಪುರಸಭೆ ಕಸದ ಗಾಡಿಗೆ ಹಾಕಬೇಕು. ರಸ್ತೆಯ ಮೇಲೆ ಎಸೆದರೆ ದಂಡ ವಿಧಿಸಲಾಗುವುದು. ಪಟ್ಟಣದಲ್ಲಿ ಶುಚಿತ್ವ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು’ ಎಂದರು.

ಪರಿಸರ ಎಂಜಿನಿಯರ್‌ ಸುಷ್ಮಾ, ತಾಂತ್ರಿಕ ಎಂಜಿನಿಯರ್‌ ಪ್ರಕಾಶ್‌ ಶೆಟ್ಟಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು